ಸಿಹಿ ಮಾತು

ಇದು ಮನಸುಗಳ ಮಾತು

ಮೌನವೇ ಮಾತಾದಾಗ….. ನವೆಂಬರ್ 13, 2009

ಇವತ್ತು ಬೆಳಗ್ಗನಿಂದಾನೇ ಯಾಕೋ ಮನಸ್ಸೇ ಸರಿ ಇಲ್ಲ ಅನ್ನಿಸ್ತಾ ಇತ್ತು…. ಯಾವತ್ತೂ ಚಿನಕುರುಳಿ ಥರಾ ಇರೋ ನನ್ನ್ ಮನಸ್ಸು ಇಂದೇಕೋ ನನ್ನ ಅಂಕೆಯಿಂದ ತಪ್ಪಿಸಿಕೊಂಡಂತಿತ್ತು….
ಇದರ ಜತೆಗೆ ಕಛೇರಿಯ ಒತ್ತಡ ನಿಜವಾಗ್ಲೂ ನನ್ನನ್ನ ನುಂಗಿ ಹಾಕಿರೋವಾಗ ಬೇಕಂದ್ರೂ happyಯಾಗಿರಕ್ಕೆ ಆಗತ್ತಾ ಹೇಳಿ???
ಇವತ್ತು ನಾನು ಸಂಜೆ ಮನೆಗೆ ನೇರವಾಗಿ ತಲುಪಿದ್ದೇ ಆಶ್ಚರ್ಯ…. ಅಷ್ಟು disturb ಆಗಿದ್ದೆ…
ನಿಮ್ಗೂ ಕೂಡಾ ಇಂಥಾ ಅನುಭವ ಖಂಡಿತಾ ಆಗೇ ಆಗಿರತ್ತೆ… ಆವಾಗ ನಿಮಗೆ ಸ್ವಲ್ಪ ಸಂಗೀತದ ಹುಚ್ಚಿದ್ದರೆ ನಿಜವಾಗ್ಲೂ “ಮುಸ್ಸಂಜೆ ಮಾತು” ಸಿನಿಮಾದಾ “ಏನಾಗಲೀ” ಗೀತೆನಾ ಇಡಿಯಾಗಿ ಅನುಭವಿಸ್ತಾ ಕೇಳಿ…. hmmmmmmmm ಸಾಹಿತ್ಯ ಮತ್ತು ಸಂಗೀತದ ಮಾಧುರ್ಯ ಎಂಥ ಮನಸ್ಸಿಗೂ ಸಮಧಾನ ಹೇಳುವುದರಲ್ಲಿ ಅನುಮಾನವೇ ಇಲ್ಲ…ಜೀವನಾನ ಹೇಗೆ ಜೀವಿಸ್ಬೇಕು ಅಂತ ಹೇಳಿರೋದು ಕೇಳಿದ್ರೆ ನಂಗೆ ಬೇಡ ಅಂದ್ರೂ ಕಣ್ನಲ್ಲಿ ನೀರು….ನನಗೆ ಆ ಗೀತೆ ಕೇಳ್ದಾಗಲೆಲ್ಲಾ ಸುದೀಪ್ ಅಭಿನಯ ಕಣ್ಣಗೆ ಕಟ್ಟದೇ ಇರೋದೇ ಇಲ್ಲಾ… ಅಬ್ಬಾ ನಂಗೆ ಬರೀ ಒಂದೇ ಗೀತೆಗೆ ಇಡೀ ಸಿನಿಮಾನೇ ನೆನ್ಪಿಗೆ ಬರೋದು ಕೇವಲ ಈ ಗೀತೆ ಕೇಳ್ದಾಗ ಮಾತ್ರ….
ಇಲ್ಲಿ ಕೇವಲ ನಿಮಗಾಗಿ ಆ ಗೀತೆಯ ಸಾಹಿತ್ಯಾನ ಕೊಟ್ಟಿದ್ದೀನಿ… ಓದಿ,ಕೇಳಿ, ಅನುಭವಿಸಿ….

ಏನಾಗಲೀ, ಮುಂದೆ ಸಾಗು ನೀ .. ಬಯಸಿದ್ದೆಲ್ಲ ಸಿಗದು ಬಾಳಲಿ ,ಬಯಸಿದ್ದೆಲ್ಲ ಸಿಗದು ಬಾಳಲಿ
ನನ್ನಾಣೆ ನನ್ನ ಮಾತು ಸುಳ್ಳಲ್ಲ…… ನನ್ನಾಣೆ ನನ್ನ ಮಾತು ಸುಳ್ಳಲ್ಲ……!!

ಚಲಿಸುವ ಕಾಲವೂ, ಕಲಿಸುವ ಪಾಟವ ,ಮರೆಯಬೇಡ ನೀ ,,ತುಂಬಿಕೋ ಮನದಲಿ…
ಚಲಿಸುವ ಕಾಲವೂ, ಕಲಿಸುವ ಪಾಟವ ಮರೆಯಬೇಡ ನೀ , ತುಂಬಿಕೋ ಮನದಲಿ!!!!
ಇಂಧಿಗೋ, ನಾಳೆಗೋ, ಒಂದಿನ ಬಾಳಲಿ ,ಗೆಲ್ಲುವಂತ ಸ್ಪೂರ್ತಿ ದಾರಿದೀಪ ನಿನಗೆ ಆ ಅನುಭವ.
ಇಂಧಿಗೋ, ನಾಳೆಗೋ, ಮುಂದಿನಾ ಬಾಳಲಿ ,ಗೆಲ್ಲುವಂತ ಸ್ಪೂರ್ತಿ ದಾರಿದೀಪ ನಿನಗೆ ಆ ಅನುಭವ.
.. ನಿನಗೆ ಆ ಅನುಭವ!!!

ಏನಾಗಲೀ, ಮುಂದೆ ಸಾಗು ನೀ ,ಬಯಸಿದ್ದೆಲ್ಲ ಸಿಗದು ಬಾಳಲಿ …
ಏನಾಗಲೀ, ಮುಂದೆ ಸಾಗು ನೀ .. ಬಯಸಿದ್ದೆಲ್ಲ ಸಿಗದು ಬಾಳಲಿ ,ಬಯಸಿದ್ದೆಲ್ಲ ಸಿಗದು ಬಾಳಲಿ
ನನ್ನಾಣೆ ನನ್ನ ಮಾತು ಸುಳ್ಳಲ್ಲ…… ನನ್ನಾಣೆ ನನ್ನ ಮಾತು ಸುಳ್ಳಲ್ಲ……!!!!

ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ, ದಯವಾತೋರುವ ಮಣ್ಣಿನಾ ಗುಣವಿದೆ….
ಸಾವಿನ ಸುಳಿಯಲಿ ,ಸಿಲುಕಿದ ಜೀವಕೆ… ಜೀವ ನೀಡುವ ಹೃದಯವೇ.. ದೈವವೂ!!!!
ಹರಸಿದ ಕೈಗಳು, ನಮ್ಮನು ಬೆಳೆಸುತ, ವಿದಿಯಬರಹವಾಗಿ ಮೌನದಲ್ಲೇ ನಮ್ಮನು ಕಾಯುತ ……!
ಪ್ರತಿಫಲ ಬಯಸದೇ ತೋರಿದ ಕರುಣೆಯು, ಮೊದಲು ಮನುಜನೆಂಬ ,ಸಾರ್ಥಕತೆಯ ನೆಮ್ಮದಿ ತರುವುದು.. ನೆಮ್ಮದಿ ತರುವುದು !!!

ಏನಾಗಲೀ, ಮುಂದೆ ಸಾಗು ನೀ ..
ಪ್ರೀತಿಗಾಗಿ ಬದುಕು ಬಾಲಲಿ..ಪ್ರೀತಿಗಾಗಿ ಬದುಕು ಬಾಳಲಿ…
!!!ನನ್ನಾಣೆ ಪ್ರೀತಿ ಎಂದು ಸುಳ್ಳಲ್ಲ!!!!!!! ನನ್ನಾಣೆ ಪ್ರೀತಿ ಎಂದು ಸುಳ್ಳಲ್ಲ….!!!!

ಹಾಗೆನೆ ಬೇಕಿದ್ದಲ್ಲಿ ನೀವು ಈ ಗೀತೇನಾ ಇಲ್ಲಿ ನೋಡಬಹುದು/ಕೇಳಬಹುದು

http://videos.desishock.net/348383/Enaagali—Mussanje-Maathu—Kannada

ನಾನಂತೂ ಇವತ್ತು ಏನಿಲ್ಲಾಂದ್ರೂ ಒಂದು 10 ಸಲ rewind ಮಾಡಿದೀನಿ ಈ ಗೀತೆನಾ…. ಇಲ್ಲಾಂದ್ರೆ ಈ ಬಗ್ಗೆ ಬರೀಬೇಕು ಅಂತಾನು ನಂಗೆ ಅನಿಸ್ತತ್ತೋ ಇಲ್ವೊ???
ಒಟ್ನಲ್ಲಿ ಒಂದು ಒಳ್ಳೇ ಸಾಹಿತ್ಯಾನ ನಿಮ್ಗೆ ಪರಿಚಯಿಸಿರೋ ಧನ್ಯತೆ ನಂಗೆ…
ನೀವು ಒಮ್ಮೆ ಕೇಳ್ಬಿಟ್ಟು ನಿಮ್ಮ ಅನುಭವಾನಾ ಇಲ್ಲಿ ಹಂಚಿಕೊಳ್ತೀರಲ್ವಾ???

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ