ಸಿಹಿ ಮಾತು

ಇದು ಮನಸುಗಳ ಮಾತು

ಸಿಂಹ ಘರ್ಜನೆ ಇನ್ನು ಕೇವಲ ನೆನಪು… (ನುಡಿ-ಚಿತ್ರ ನಮನ) ಡಿಸೆಂಬರ್ 30, 2009

ಕನ್ನಡಿಗರಿಗೆ ಒಂದೇ ದಿನದ ಅಂತರದಲ್ಲಿ 2 ಆಘಾತ…. ನಿನ್ನೆ 29 ರಂದು ಅಶ್ವತ್ ನಿಧನದ ಸುದ್ದಿ… ಇಂದು 30ರಂದು ಬೆಳಗ್ಗೆ ಏಳ್ಬೇಕಾದ್ರೆ ಸಾಹಸಸಿಂಹ ಘರ್ಜನೆ ನಿಲ್ಲಿಸಿರುವ ವಾರ್ತೆ…. ಇಲ್ಲಿ ನನ್ನ ಒಂದು ಚಿಕ್ಕ ಚಿತ್ರ ನಮನ ಆ ದೊಡ್ಡ ಚೇತನಕ್ಕೆ…. ಈರ್ವರ ಆತ್ಮಕ್ಕೂ ಚಿರಶಾಂತಿ ಸಿಗಲಿ ಅನ್ನೋದೇ ನನ್ನ ಪುಟ್ಟ ಮತ್ತು ಪ್ರಾಮಾಣಿಕ ಪ್ರಾರ್ಥನೆ….
ಮಲಗಿದ ನಾಗರಹಾವು....

ಆಧ್ಯಾತ್ಮದತ್ತ ವಿಷ್ಣು ಚಿತ್ತ....ಬಾಳ ಸಂಗಾತಿ ಭಾರತಿಯವರೊಂದಿಗೆ...ನಿಮ್ಮ ಅಭಿಮಾನಕ್ಕೆ ಚಿರಋಣಿ...ನಮ್ಮೆಜಮಾನ್ರು....ಕೊನೆಯ ಚಿತ್ರ ಬಳ್ಳಾರಿ ನಾಗ....

ಇನ್ನು ನಮ್ಮ ವಿಷ್ಣು ಸರ್ ಕೆಲ ಗೀತೆಗಳನ್ನ ಕೂಡಾ ಹಾಡಿದ್ದಾರೆ… ಅದ್ರಲ್ಲಿ ನನ್ನನ್ನ ತುಂಬಾ ಕಾಡೋ ಗೀತೆ ಅಂದ್ರೆ “ಜಿಮ್ಮಿಗಲ್ಲು” ಸಿನಿಮಾದ “ತುತ್ತು ಅನ್ನ ತಿನ್ನೋಕೆ”.. ಅವರಿಗೆ ಭಾವಪೂರ್ಣ ನಮನಕ್ಕಾಗಿ ಇಲ್ಲಿ ಆ ಗೀತೆನಾ ಕೂಡಾ ಕೊಟ್ಟಿದ್ದೀನಿ…
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅoಗೈಯಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ಕಾಡ್ನಾಗೊoದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊoದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಾಡ್ನಾಗೊoದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊoದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಅಲ್ಲೇ ನನ್ನ ಹೋಗು ಅಂದರೇನು
ಸ್ವರ್ಗದಂತಾ ಊರು ನನ್ನ ಹತ್ತಿರ ಕರೆದಾಯ್ತು
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ಕಷ್ಟಾ ಒಂದೇ ಬರದು ಸುಖವೂ ಬರದೇ ಇರದು
ರಾತ್ರೀ ಮುಗಿದಾ ಮೇಲೇ ಹಗಲು ಬಂದೇ ಬತ್ತೈತೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೇ ನಂಗೆ ಅಪ್ಪ ಅಮ್ಮ ಎಲ್ಲಾ
ಸಾಯೋ ತನಕಾ ನಂಬಿದವರ ಕೈ ಬಿಡಾಕಿಲ್ಲ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅoಗೈಯಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ..ಹಾಯಾಗಿರೋಕೆ..

ಆ ಮಹಾನ್ ಚೇತನ ಎಲ್ಲಿದ್ದರೂ ಹಾಯಾಗೇ ಇರಲಿ ಅನ್ನೋದೇ ನಮ್ಮ ಅಭಿಲಾಷೆ… ಏನಂತೀರಾ???

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

ಕೋಡಗನ ಕೋಳಿ ನುಂಗಿತ್ತಾ…. ಸಿ.ಅಶ್ವತ್ ಗೆ ನುಡಿ-ಚಿತ್ರ ನಮನ….

ಈ ಪ್ರೀತಿ ಈಗ ನೆನಪು ಮಾತ್ರ...


ತೆರೆದೆರೆನಾ... ರೆ ರೇ.. ರೇ.. ನಾ.....
ಉಳುವಾ ಯೋಗಿಯ ನೋಡಲ್ಲಿ..... ಸುಗಮ ಸಂಗೀತದ ಮುಳುಗಿದ ಸೂರ್ಯ...We Miss U

ದೊರೆತ ಪ್ರಶಸ್ತಿಗಳು ಹಲವಾರು....

ಒಂದು ಅಪರೂಪದ ಚಿತ್ರ...

ಅಶ್ವಥ್ ಅವರಿಂದಾಗೇ… ಕರ್ನಾಟಕದ ರೈತರ ನಾಡಗೀತೆ ಅಂತ ಗುರುತಿಸಲ್ಪಟ್ಟ ಮತ್ತು ಅವರ ಹಾಡುಗಳಲ್ಲಿ ನಂಗೆ ಇಷ್ಟವಾದ ಒಂದು ಗೀತೆ ಇಲ್ಲಿ ನಿಮಗಾಗಿ.. ಮತ್ತು ನನ್ನ ಕಂಬನಿಗಾಗಿ…

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗೀ
ಉಳುವಾ ಯೋಗಿಯ ನೋಡಲ್ಲಿ ||

ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||
ಉಳುವಾ ಯೋಗಿಯ ನೋಡಲ್ಲಿ ||

ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||
ಉಳುವಾ ಯೋಗಿಯ ನೋಡಲ್ಲಿ ||

ಅಶ್ವಥ್ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪುಗಳು ಸದಾ ನಮ್ಮ ಜೊತೆ ಅವರು ಹಾಡಿದ ಅಮರವಾದ ಗೀತೆಗಳ ಜತೆ ಇದ್ದೇ ಇರತ್ತೆ…

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ