ಸಿಹಿ ಮಾತು

ಇದು ಮನಸುಗಳ ಮಾತು

ಸಂಕ್ರಾಂತಿ/ಪೊಂಗಲ್ ಹಬ್ಬದ ಶುಭಾಷಯಗಳು… ಜನವರಿ 12, 2010

Filed under: ನನ್ನ ಹರಟೆಗಳು — Keshava Prasad M @ 5:25 ಅಪರಾಹ್ನ
Tags: , , ,

ಸಂಕ್ರಾಂತಿಯ ಶುಭಾಷಯಗಳು....

ಸಂಕ್ರಾಂತಿ… ಅಂದ್ರೆ ನಮಗೆ ಭಾರತೀಯರಿಗೆ ಮಕರ ಸಂಕ್ರಾಂತಿ… ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಇದರ ಆಚರಣೆ ಬಹಳ ಜಾಸ್ತಿ… ಕರ್ನಾಟಕದಲ್ಲಿ ಇದು ಸಂಕ್ರಾಂತಿ ಯಾದ್ರೆ ತಮಿಳರಿಗೆ ಇದು ಪೊಂಗಲ್… ಈ ದಿನ ಎಳ್ಳು ಬೆಲ್ಲ ನೀಡಿ ಪರಸ್ಪರ ಗೌರವಿಸುವುದು ಮತ್ತು ಶುಭ ಹಾರೈಸುವುದು ಸಾಮಾನ್ಯ ಸಂಗತಿ… ಇಲ್ಲಿ wikipediaದಿಂದ ಕದ್ದಿರೋ ವಿಶ್ಯಾನಾ ಇದ್ದಿದ್ದು ಇದ್ದ ಹಾಗೇನೇ ನಿಮ್ಮ ಜ್ಷಾನದ ಹೆಚ್ಚಳಕ್ಕಾಗಿ ಕೊಟ್ಟಿದ್ದೀನಿ..

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.

ಕರ್ನಾಟಕ
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು”. ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳು ಬೀರುವುದು” ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು,ಹಣ್ಣು,ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ,ಒಣ ಕೊಬ್ಬರಿ,ಹುರಿಗಡಲೆ,ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು” ತಯಾರಿಸಲಾಗುತ್ತದೆ.
ತಮಿಳುನಾಡು
ತಮಿಳುನಾಡಿನಲ್ಲಿ ಈ ಹಬ್ಬವನ್ನು “ಪೊಂಗಲ್” ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ – ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ:
ಭೋಗಿ: ಹೊಸ ಬಟ್ಟೆಗಳು
ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ
ಮಾಟ್ಟು ಪೊಂಗಲ್: ಗೋಪೂಜೆ
ಕೆಲವು ಕಡೆಗಳಲ್ಲಿ “ಜಲ್ಲಿಕಟ್ಟು” ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ
ಕಾಣುಮ್ ಪೊಂಗಲ್
ಇತರ ಸ್ಥಳಗಳು
ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಕರ್ನಾಟಕದ ಸಂಪ್ರದಾಯದ ತರಹ ಬಿಡಿಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಹಾ. ಎಳ್ಳುಂಡೆಕೊಡುವಾಗ ತಪ್ಪದೆ, ” ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ”, ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ ! ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ “ಲೋಹರಿ,” ಎಂದು ಹೆಸರು

ಈಗ ನಿಮಗೆ ಸಾಕಷ್ಟು ಮಾಹಿತಿ ಸಿಕ್ತಲ್ಲಾ???? ಈಗ ನೀವು ಕೂಡಾ ಸಂಕ್ರಾಂತಿ ಹಬ್ಬಕ್ಕೆ ರೆಡಿಯಾಗಿ… ಸಂಭ್ರಮದಿಂದ ಆಚರಿಸಿ… ನಿಮಗೆಲ್ಲರಿಗೂ “ಸಿಹಿಮಾತು” ಬಳಗದಿಂದ ಸಂಕ್ರಾಂತಿಯ ಶುಭಾಷಯಗಳು…. ನಿಮ್ಮೆಲ್ಲಾ ಆಸೆಗಳನ್ನ ಆ ಪರಮಾತ್ಮ ಈ ಹೊಸ ವರ್ಷದಲ್ಲಿ ಈಡೇರಿಸಲಿ…

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ