ಸಿಹಿ ಮಾತು

ಇದು ಮನಸುಗಳ ಮಾತು

ಸ್ನೇಹಿತರ ದಿನಾಚರಣೆ …. ಒಂದೆರಡು ಥಾಟ್ಸ್… !!! ಆಗಷ್ಟ್ 7, 2011

ಸ್ನೇಹದ ಕಡಲಲ್ಲಿ...

ಹೌದು,…. ಎಲ್ಲಾರು ಸ್ನೇಹಿತರ ದಿನಾಚರಣೆ, ಸ್ನೇಹಿತರ ವೀಕ್ ಅಂತ ಸಾಯ್ತಾ ಇರ್ತಾರೆ… ಆ ಟೈಮ್ ನಲ್ಲಿ ಅವ್ರು ಕಳ್ಸೋ ಮೆಸ್ಸೇಜ್ ಗಳೇನು.. ಮೇಲ್ ಗಳೇನು.. ಅಬ್ಬಬ್ಬಾ… ಆದ್ರೆ ಆ ವೀಕ್ ಮುಗೀತು ಅಂದ್ರೆ ಅವ್ರಿಗೆ ಆ ಫ್ರೆಂಡ್ ನೆನ್ಪಿರ್ತನೋ ಇಲ್ವೋ.. !!!!
ನಮ್ಮಲ್ಲಿ ಎಲ್ಲಾನು ಅಸ್ಟೇ… ಸ್ವಲ್ಪ ಅತಿಯಾಗೆ ಮಾಡ್ತೀವಿ… ಅದು ಸ್ನೇಹಿತರ ದಿನಾಚರಣೆ ಇರ್ಬೋದು ಅಥವ ಪ್ರೇಮಿಗಳ ದಿನಾಚರಣೆ ಇರ್ಬೋದು… ನಮಗೆ ಏನೂ difference ಅನ್ಸಲ್ಲ… ಏನೋ ಎಲ್ಲರೂ ಮೆಸ್ಸೇಜ್ ಕಳಿಸ್ತಿದ್ದಾರೆ ನಾನು ಫಾರ್ವರ್ಡ್ ಮಾಡ್ತೀನಿ ಅಸ್ಟೇ…!!! ಹೋಗ್ಲಿ ಬಿಡಿ.. ನಾನು ನೀವು ಸೇರ್ಕಂಡು ಎಲ್ಲಾನೂ ಚೇಂಜ್ ಮಾಡಕ್ಕೆ ಆಗಲ್ಲ ಆಲ್ವಾ???
ಆದ್ರೆ ನಾನಿಲ್ಲಿ ಒಂದು ವಿಷ್ಯ ಮಾತ್ರ ಹೇಳಲೇ ಬೇಕು.. ಅದ್ಕೆ ಸುಮಾರು ದಿನದ ನಂತರ ಸಿಹಿಮಾತು ಓಪನ್ ಮಾಡಿದ್ದೀನಿ.. 😉
ಹೌದು ನಮಗೆ ಬಹಳಷ್ಟು ಜನ ಫ್ರೆಂಡ್ಸ್ ಇರ್ತಾರೆ.. ಕೆಲವರು ಬಾಲ್ಯ ಸ್ನೇಹಿತರು.. ಇನ್ನು ಕೆಲವರು ಸ್ಕೂಲ್ ಮೇಟ್ಸ್, ಕಾಲೇಜ್ ಮೇಟ್ಸ್, ಅಥವ ಆಫೀಸ್ ಫ್ರೆಂಡ್ಸ್… ಆದ್ರೆ ಎಲ್ಲರು ಎಲ್ಲಾ ಕಾಲದಲ್ಲೂ ನಿಮಗೆ ಫ್ರೆಂಡ್ಸ್ ಆಗಿರ್ತಾರ??? ಹೋಗ್ಲಿ ನೀವಿದನ್ನ ಯೋಚನೆ ಮಾಡಿದ್ದೀರಾ?? ಅವ್ರು ಎಲ್ಲ ಕಾಲದಲ್ಲೂ ನಿಮ್ ಫ್ರೆಂಡ್ಸ್ ಅಲ್ಲ ಅಂತಾದ್ರೆ ಅದು ಬರೀ timely ರಿಲೇಶನ್ಶಿಪ್ಪಾ ?? ಟೈಮ್ ಇದ್ರೆ ಇದ್ನೆಲ್ಲ ಸ್ವಲ್ಪ ಥಿಂಕ್ ಮಾಡಿ..
ಹೌದು.. ನಾನು ಹೇಳೋದಾದ್ರೆ ಫ್ರೆಂಡ್ಶಿಪ್ ಅನ್ನೋದು ಒಂಥರಾ timely ರಿಲೇಶನ್ .. ನಿಮ್ ಫ್ರೆಂಡ್ ಶಿಪ್ ನಿಮ್ಮ ಸ್ಟೇಟಸ್ ಮತ್ತು ಮೆಂಟಲ್ ಮಟುರಿಟಿಗೆ ಅನುಗುಣವಾಗಿ ಚೇಂಜ್ ಆಗ್ತಾ ಇರತ್ತೆ.. ಆದ್ರೇ ಕೆಲವರು ಮಾತ್ರ ಎಲ್ಲಾ ಟೈಮ್ ನಲ್ಲೂ ನಿಮ್ ಫ್ರೆಂಡ್ ಆಗೇ ಉಳಿತಾರೆ… ಅಂಥದ್ದು ಏನಿದ್ಯಲ್ಲ ಅದೇ ರಿಯಲ್ friendship .. ಆದ್ರೆ ಒಬ್ಬ ಮನುಷ್ಯನ ಜೀವಮಾನದಲ್ಲಿ ಅಂಥದ್ದು ಇರೋದು ಒಂದೋ ಎರಡೋ ಅಸ್ಟೇ..
ಈಗ ನಾನು ಹೇಳಿದ್ದನ್ನ ನೀವೇ ಒಮ್ಮೆ ಯೋಚನೆ ಮಾಡಿ.. ನಿಮ್ಮ ಚಡ್ಡಿ ದೋಸ್ತ್ ಆಫ್ childhood ಈವಾಗ ಸಿಕ್ದ ಅಂತ ಇಟ್ಕೊಳ್ಳಿ… ನಿಮಗೆ ನಿಜವಾಗಿ ಅವನತ್ರ ಮಾತಾಡೋಕೆ ವಿಷ್ಯನೇ ಇರಲ್ಲ..ಅಥವಾ ನಿಮಗೆ ಅವನನ್ನ ಮಾತಾಡಿಸಬೇಕು ಅಂತಾನು ಅನ್ಸಲ್ಲ… ಆದರೂ ನಾಮ್ ಕೆ ವಾಸ್ತೇ ಒಂದು ೧೦ ನಿಮಿಷ ಏನಾದರೂ ಲೋಕಾಭಿರಾಮ ಮಾತಾಡ್ಬೋದು.. ನಂತರ ಏನೂ ಇಲ್ಲ ಖಾಲಿ ಖಾಲಿ ಅನ್ಸತ್ತೆ… ಅದೇ ನಿಮ್ಮ childhood ನಲ್ಲಿ ನೀವು ಅವನತ್ರ ದಿನಗಟ್ಟಲೆ ಮಾತಾಡಿರ್ರ್ತೀರಿ… ಇದಕೆ ಕಾರಣ ಬೇರೇನಲ್ಲ.. ನಾನಾಗಲೇ ಹೇಳಿದ್ನಲ್ಲ.. ಸ್ಟೇಟಸ್/ಮೆಂಟಲ್ ಮಟುರಿಟಿ ಅಂತ… ಅದೇ…;) ಈವಾಗ ಹೇಳಿ.. ನಿಮಗೆ ಎಷ್ಟು ಜನ ರಿಯಲ್ ಫ್ರೆಂಡ್ಸ್ ಇದ್ದಾರೆ ಅಂತ?? ಫ್ರೆಂಡ್ಶಿಪ್ ಅನ್ನೋದು timely ರಿಲೇಶನ್ ಹೌದಾ ಅಲ್ವಾ??

Dedicated to all true friends... 🙂

ಸೋ ನಿಮ್ ಎಲ್ಲಾ ರಿಯಲ್ ಫ್ರೆಂಡ್ಸ್ ಗೆ ಇವತ್ತು ನಿಜವಾಗಲೂ ಮನಸಾರೆ ವಿಶ್ ಮಾಡಿ… ಅವನನ್ನ ಎಷ್ಟು ಮಿಸ್ ಮಾಡ್ಕೊತ್ತೀದೀರ ಅಂತಾನು ಹೇಳಿ.. ಪಾಪ ಖುಷಿಯಗ್ತಾನೆ..!!!
ನಿಮ್ ಜೀವನದಲ್ಲಿ ಎಷ್ಟು ಜನ ಫ್ರೆಂಡ್ಸ್ ಇದ್ದಾರೆ ಅನ್ನೋದು importent ಅಲ್ಲ.. ನಿಮ್ ಇರೋ ಫ್ರೆಂಡ್ಶಿಪ್ ನಲ್ಲಿ ಎಷ್ಟು ಜೀವ ಇದೇ ಅನ್ನೋದೇ important ..!!

ಎಲ್ಲಾ ನನ್ ರಿಯಲ್ ಫ್ರೆಂಡ್ಸ್ ಗಳಿಗೂ friendship ಡೇ ಯಾ ಹಾರ್ದಿಕ ಶುಭಾಶಯಗಳು.. !!!

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

2 Responses to “ಸ್ನೇಹಿತರ ದಿನಾಚರಣೆ …. ಒಂದೆರಡು ಥಾಟ್ಸ್… !!!”

  1. Rajendra Halemane Says:

    ನೀವು ಹೇಳಿದ್ದು ೧೦೦% ಸರಿ. ಹೆಚ್ಹಿನ ಸ್ನೇಹಿತರು ನಾಮಕವಾಸ್ತೆ ಸ್ನೇಹಿತರು. ನಿಜವಾದ ಸ್ನೇಹಿತರು ಗೊತ್ತಾಗುವುದು, ಆ ಪ್ರಸ೦ಗ ಬ೦ದಾಗ! ನೀವು ಹೇಳಿದ೦ತೆ ೨% ಸ್ನೇಹಿತರು ಸ್ನೇಹಿತರಾಗಿ ಮಾತ್ರ ಉಳಿಯುವುದು.. ನಮ್ಮ ಸ್ನೇಹಿತರು ೫ ವರ್ಷಕ್ಕೊಮ್ಮೆ ಬದಲಾಗ್ತಾರೆ..

  2. Praveena Says:

    “ನಿಮ್ ಜೀವನದಲ್ಲಿ ಎಷ್ಟು ಜನ ಫ್ರೆಂಡ್ಸ್ ಇದ್ದಾರೆ ಅನ್ನೋದು important ಅಲ್ಲ.. ನಿಮ್ ಇರೋ ಫ್ರೆಂಡ್ಶಿಪ್ ನಲ್ಲಿ ಎಷ್ಟು ಜೀವ ಇದೇ ಅನ್ನೋದೇ important ..!! “….super quote boss this is …after long time you written one good post…Thank you for the wishes and s2u..I will try to be real friend to u..


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s