ಸಿಹಿ ಮಾತು

ಇದು ಮನಸುಗಳ ಮಾತು

ಬಂದಿದೆ ಬಣ್ಣಗಳ ಹಬ್ಬ ಹೋಳೀ… ನೀವೆಲ್ಲಾ ಸ್ವಲ್ಪ ಓಕುಳಿಯಾಡಿ… ಫೆಬ್ರವರಿ 27, 2010

Filed under: ನನ್ನ ಹರಟೆಗಳು — Keshava Prasad M @ 10:23 ಅಪರಾಹ್ನ
Tags: , , , , ,

ಹೋಳೀ ಹಬ್ಬದ ಶುಭಾಷಯಗಳು....


ಹೋಳಿಯ ಇತಿಹಾಸ ಹೀಗಿದೆಯಂತೆ….
ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ , ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ.
ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ… ಇದೇ ಹೋಳೀ ಹುಣ್ಣಮೆ… ಉತ್ತರ ಕರ್ನಾಟಕದಲ್ಲಿ ಬಹುದೊಡ್ಡ ಹಬ್ಬ…
ಇದರ ಆಚರಣೆ ಈ ರೀತಿ ಇರತ್ತಂತೆ….
ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ , ಬಿದಿರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುವರು. ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸುವರು. ಉತ್ತರ ಪ್ರದೇಶದಲ್ಲಿ ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಜನಪ್ರಿಯವಾಗಿದೆ.

ಹೋಳಿಯ ಮಜಾ ಹೀಗಿರತ್ತೆ....


ಹೋಳೀ ಅಂದಾಗ ನನಗಾದ ಒಂದು ಅನುಭವಾನ ಇಲ್ಲಿ ಹಂಚಿಕೊಳ್ಳದಿದ್ದರೆ ಈ ಲೇಖನ ಅಪೂರ್ಣವಾಗುವುದರಲ್ಲಿ ಸಂದೇಹವೇ ಬೇಡ. ನಾನಾಗ ಹುಬ್ಭಳ್ಳಿಗೆ ಕಾಲಿಟ್ಟ ಮೊದಲನೇ ವರ್ಷ… ಹೇಳೀ ಕೇಳೀ ಹೋಳೀ ಅಂದರೇನು ಅಂತ ಕೇವಲ ಪುಸ್ತಕದಲ್ಲಿ ಮಾತ್ರ ಓದಿರೋ ಜನರ ಮಧ್ಯದಿಂದ ಬಂದವನು.. ಅದಕ್ಕೇ ಇಂಥಾ ಒಂದು ಹೋಳಿ ದಿವ್ಸಾ ಯಾವುದೇ ಯೋಚನೆ ಇಲ್ಲದೇ ಮನೆಯಿಂದ ಹೊರಬಿದ್ದಿದ್ದೆ…. ಅದೂ ನನ್ನ ಉತ್ತಮ ಬಟ್ಟೆಗಳನ್ನ ಧರಿಸಿ… ಹೊರಗೆ ಬಂದು ನೋಡಿದಾಗಲೇ ನಂಗೆ ದಿಗಿಲಾಗಿದ್ದು!!!! ಎಲ್ಲಾ ರಸ್ತೆ/ಗಲ್ಲಿ ಗಳೂ ಬಣ್ಣಮಯ… ಜನಗಳೂ ಬಣ್ಣಮಯ… ಇಂಥಾ ಸಂದರ್ಭದಲ್ಲೇ ಯಾರೋ ನನ್ನ ಮೇಲಕ್ಕೂ ಈ ಬಣ್ಣ ಎರಚಿ ಬಿಡೋದಾ???… Ufffff… ಅದೂ ಇತ್ತೀಚೆಗೆ ವ್ಯಾಪಕವಾಗಿ ಉಪಯೋಗಿಸೋ ಕ್ರತಕ ಬಣ್ಣ!!! ಅದೇ ಕೊನೆ ಕಣ್ರೀ ನಾ ಆ ಅಂಗಿ ಮತ್ತು ಪ್ಯಾಂಟನ್ನ ಧರ್ಸಿರೋದು…. ಕುಲಗೆಟ್ಟೋಗಿತ್ತು!!!!… ಹೇಳಿ ಈಗ… ನಾನು ಹೋಳೀನಾ ಮರ್ಯೋಕ್ಕಾಗತ್ತಾ!!!!

ಈಗಲೂ ಅಷ್ಟೆ ಹೋಳೀ ಆಡಿ.. ಆದ್ರೆ ಉಪಯೋಗಿಸೋ ಬಣ್ಣದ ಬಗ್ಗೆ ಕಾಳಜಿ ಇರಲಿ… ಯಾರಿಗೆ ಆಸಕ್ತಿ ಇಲ್ಲಾನೋ ಅವ್ರಿಗೆ ದಯವಿಟ್ಟು ತೊಂದ್ರೆ ಕೊಡ್ಬೇಡಿ!!!
(ಮಾಹಿತಿ: wikipediea)

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

One Response to “ಬಂದಿದೆ ಬಣ್ಣಗಳ ಹಬ್ಬ ಹೋಳೀ… ನೀವೆಲ್ಲಾ ಸ್ವಲ್ಪ ಓಕುಳಿಯಾಡಿ…”

  1. Aneesh P V Says:

    ಎಲ್ಲರಿಗೂ ಹೋಳಿ ಹಬ್ಬದ ಶುಭಾಷಯಗಳು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s