ಸಿಹಿ ಮಾತು

ಇದು ಮನಸುಗಳ ಮಾತು

ಇಲ್ಲಿ ಮಾತಲ್ಲೇ ಎಲ್ಲಾ… ಆದ್ರೂ ಮಾತೇ ಇಲ್ಲ!!! (ಜಸ್ಟ್ ಮಾತ್ ಮಾತಲ್ಲಿ) ಫೆಬ್ರವರಿ 23, 2010

ಜಸ್ಟ್ ಮಾತ್ ಮಾತಲ್ಲಿ....

ಹೌದು…ಇದು ಇನ್ನೊಂದು ಸುದೀಪ್ ಚಿತ್ರ!!!… ಸುದೀಪ್ ಚಿತ್ರದಿಂದ ಜನ ಏನನ್ನ ನಿರೀಕ್ಷಿಸುತ್ತಾರೋ ಬಹುತೇಕ ಅವ್ರಿಗೆ ಅದು ಇದ್ರಲ್ಲಿ ಸಿಕ್ಕೇ ಸಿಗತ್ತೆ.. ಅದ್ಕೇ ಇದು ಸುದೀಪ್ ಬ್ರಾಂಡ್ ನ ಚಿತ್ರ ಅಂದಿದ್ದು. ಕನ್ನಡದಲ್ಲಿ ಹಾಸ್ಯ ಮತ್ತು ಹೊಡೆದಾಟ ಇಲ್ಲದೇನೂ ಒಂದು ಚಿತ್ರಾನಾ ಗೆಲ್ಲಿಸ್ಬಹುದು ಅಂತ ಮೊದ್ಲು ತೋರ್ಸಿದ್ದೇ ಸುದೀಪ್… ಅವ್ರು ಅದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ನನ್ನ ನಿನ್ನೇಗಳು ನೀನೇ...ನಾಳೇಗಳು ನೀನೇ....


ಇಲ್ಲಿ ಎಲ್ಲಾರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸೋಕೆ ಪ್ರಯತ್ನ ಪಟ್ಟಿದ್ದಾರೆ ಮತ್ತು ಯಶಸ್ವೀನೂ ಆಗಿದ್ದಾರೆ ಅನ್ನಬಹುದು.ಸುದೀಪ್ ಅಂತೂ ಕನ್ನಡದ “ಅಮೀರ್ ಖಾನ್” ಥರಾ ಆಗ್ಬಿಟ್ಟಿದ್ದಾರೆ. ಅವರ ಪಾತ್ರದಲ್ಲಿ ಮಾತೇ ಇಲ್ಲ… ಆದ್ರೂ ಎಲ್ಲಾನೂ ಇದೆ ಅಂತ ಅನ್ಸತ್ತೆ!!! ಇನ್ನು ರಮ್ಯಾ… ಅವ್ರಿಗೆ ಇಲ್ಲಿ ಜಾಸ್ತಿ ಅವಕಾಶ ಇಲ್ಲ ಆದ್ರೂನೂ ಮಿಂಚಿಂಗ್ ಗೆ ಏನೂ ತೊಂದ್ರೆ ಇಲ್ಲ. ರಾಜೇಶ್ ಪಾತ್ರಕ್ಕೆ ಮಾತ್ರ ಇಲ್ಲಿ ಮಾತು ಯಾಕೋ ಸ್ವಲ್ಪ ಜಾಸ್ತಿ ಆಯ್ತು ಅನ್ಸೋದು ಮಾತ್ರ ಸಹಜ.
ಸುದೀಪ್ ಇಲ್ಲಿ ಒಂಥರಾ ಡಿಫರೆಂಟ್ style ನ್ನ ನಿರೂಪಣೆಯಲ್ಲಿ ಉಪಯೋಗಿಸಿದ್ದಾರೆ. ಕಥೆ ಹೇಳೋ ಥರಾ ಅನ್ಸೋ ಈ ಶೈಲಿ ಕನ್ನಡದ ಮಟ್ಟಿಗೆ ಹೊಸದೇ ಅನ್ನಬಹುದು. ಆದ್ರೂ ತಾವೇನು ಹೇಳ್ಬೇಕು ಅನ್ನೋದನ್ನ ಜನಕ್ಕೆ ತಲುಪಿಸೋಕೆ ಸುದೀಪ್ ಯಶಸ್ವಿಯಾಗಿದ್ದಾರೆ. ಇನ್ನು ಇಲ್ಲಿನ ಸಾಹಿತ್ಯ,ಸುಂದರ ಲೊಕೇಶನ್ ಗಳಲ್ಲಿ ಚಿತ್ರೀಕರಣ ಎಲ್ಲಾನೂ ಒಂದು ಒಳ್ಳೇ ಚಿತ್ರ ಅನ್ನಿಸ್ಕೊಳ್ಳೋಕ್ಕೆ ಸಹಾಯ ಮಾಡಿದೆ. ಛಾಯಾಗ್ರಾಹಕ ವೆಂಕಟ್ ತಮ್ಮ ಲೆವೆಲ್ ಗಿಂತ ಸ್ವಲ್ಪ ಹೆಚ್ಚೇ ಅನ್ನೋ ಹಾಗೆ ತಮ್ಮ ಛಾಪು ಮೂಡಿಸಿದ್ದಾರೆ. ಇನ್ನು ರಘು ದೀಕ್ಷಿತ್ ಸಂಗೀತದ ಬಗ್ಗೆ ಎರಡನೇ ಮಾತೇ ಇಲ್ಲ… ಈ ಸಿನಿಮಾದಾ 2 ನೇ ನಾಯಕ ನಿಜವಾಗ್ಲೂ ಅವ್ರ ಸಂಗೀತಾನೇ… ಆದ್ರೆ ಅವ್ರ ಡ್ರಮ್ಸ್ ಬಗ್ಗೆ ಇರೋ ಪ್ರೇಮ ಸ್ವಲ್ಪ ಕಡಿಮೆ ಆಗಿದ್ದಿದ್ರೆ ಅದರ ಕಥೇನೇ ಬೇರೆ ಇರ್ತಿತ್ತು ಬಿಡಿ.
ಹಾಗಂತ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಅಂತೇನೂ ಅಲ್ಲ!!! ಚಿತ್ರದ ಕೊನೆಯಲ್ಲಿ ಸುದೀಪ್ ಒಂದು ಮಾತು ಹೇಳ್ತಾರೆ..” ನನ್ನ ಕಥೆ ಕ್ಲೈಮಾಕ್ಸ್ ನಿಂದಾನೇ ಆರಂಭ ಆಗತ್ತೆ ಯಾಕಂದ್ರೆ ನಿಜವಾಗಿ ಇಲ್ಲಿ ಕಥೇನೇ ಇಲ್ಲ” ಅಂತ… ಆದ್ರೆ ಅದು ಸತ್ಯ ಅನ್ನೋದು ನಮ್ಗು ಕೂಡಾ ಅರಿವಾಗೋದು ಸಿನಿಮಾ ನೋಡಿದ ನಂತ್ರಾನೇ… ಅದ್ಕೇ ಪಾಪ ಸುದೀಪ್ ಸೇಫು…. ನಿಧಾನ ನಿರೂಪಣೆ ನಿಮ್ಮ ಸಹನೇನಾ ಸಕ್ಕತ್ತಾಗೇ ಪರೀಕ್ಷೆ ಮಾಡತ್ತೆ… ಆದ್ರೆ ಸುದೀಪ್ ಅಭಿನಯ ಅದನ್ನ ಸ್ವಲ್ಪಾನಾದ್ರೂ ಸಹ್ಯವಾಗಿಸತ್ತೆ!!!! ಹೇಳಿ ಕೇಳಿ ಇದೊಂದು ಸಾಧಾರಣ ಲವ್ ಸ್ಟೋರಿ… ಆದ್ರೆ ಅದ್ರ ನಿರೂಪಣೆ ಮಾತ್ರ ಭಿನ್ನ ಅಷ್ಟೆ.ಆದ್ರೂ ಕನ್ನಡದ ಪ್ರೇಕ್ಷಕ ಇನ್ನೂ ಇದೇ ತರಹದ ಕೆಲವು ಸಿನಿಮಾಗಳನ್ನಾದ್ರೂ ಖಂಡಿತಾ ನಿರೀಕ್ಷಸಬಹುದು!!!! ಯಾಕಂದ್ರೆ ಗಾಂಧೀನಗರ ಯಾವತ್ತೂ ಗೆಲುವಿನ ಸೂತ್ರದ ಹಿಂದೆ ಬಿದ್ದಿರತ್ತಲ್ಲ ಅದ್ಕೆ!!!
ಈ ಸಿನಿಮಾದ ಕ್ಲೈಮಾಕ್ಸ್ ನೋಡ್ದಾಗ ನಿಮ್ಗೆ ಮುಂಗಾರು ಮಳೆ ನೆನ್ಪಾಗೋ ಛಾನ್ಸ್ ಇದೆ… ಯಾಕಂದ್ರೆ ಅದೂ ಕೂಡಾ ಇತ್ತೀಚೆಗೆ ಗಾಂಧೀನಗರದ ಗೆಲುವಿನ ಸಿದ್ಧ ಸೂತ್ರ ಆಗಿದೆಯಲ್ಲಾ!!!!

ಕುಂತಲ್ಲು ನೀನೆ, ನಿಂತಲ್ಲು ನೀನೆ
ಎಲ್ಲೆಲ್ಲೂ ನೀನೆ ಸಖೀ...


ಒಟ್ಟಿನಲ್ಲಿ ಈ ಸಿನಿಮಾಕ್ಕೆ ಶಂಕರೇ ಗೌಡ್ರು ಹಾಕಿರೋ ದುಡ್ಡಿಗೆ ಯಾವುದೇ ತೊಂದ್ರೆ ಬರೋ ಅವಕಾಶ ಇಲ್ಲ… ಪ್ರೇಕ್ಷಕರಿಗೂ ಅಷ್ಟೆ.. ಕೊಟ್ಟಿರೋ ದುಡ್ಡಿಗೆ ಸುದೀಪ್ ಮೋಸ ಮಾಡಿಲ್ಲ. ಕುಟುಂಬ ಸಮೇತರಾಗಿ ಒಮ್ಮೆ ಹೋಗಿ ನೋಡಬಹುದಾದಂಥಾ ಚಿತ್ರಾನೇ ಕೊಟ್ಟಿದ್ದಾರೆ… So.. ಇನ್ಯಾಕೆ ತಡ.. ಟಾಕೀಸ್ ನಿಂದ ಸಿನಿಮಾ ಹೊರಗೆ ಹೋಗೋದ್ರೊಳ್ಗೆ ಒಮ್ಮೆ ನಿಮ್ಮ ಸಂಸಾರ ಸಮೇತರಾಗಿ ಹೋಗಿ ಚಿತ್ರ ನೋಡಿ ಪಾವನರಾಗಿ!!!! ಇದನ್ನ ನೀವು ನೋಡಿ ಸಿನಿಮಾ ಗೆದ್ರೆ ಸ್ವಮೇಕ್ ಸಿನಿಮಾನೂ ಕನ್ನಡದಲ್ಲಿ ಗೆಲ್ಲತ್ತೆ ಅನ್ನೋದು PROVE ಆಗತ್ತೆ… ಜತೆಗೆ ಕನ್ನಡ ಪ್ರೇಕ್ಷಕರಿಗೆ ಇನ್ನಷ್ಟು ಸ್ವಮೇಕ್ ಚಿತ್ರಾನಾ ನೋಡೋ ಸೌಭಾಗ್ಯಾನೂ ಬರತ್ತೆ… ಈ ಒಂದು ಕಾರಣಕ್ಕಾಗಿಯಾದ್ರೂ”ಜಸ್ಟ್ ಮಾತ್ ಮಾತಲ್ಲಿ” ಒಮ್ಮೆ ತೆಪ್ಪಗೆ ನೋಡಿ ಬನ್ನಿ….

ನನ್ನ ನೆನ್ನೆಗಳೂ ನೀನೆ, ನಾಳೆಗಳು ನೀನೆ,
ಎಂದೆಂದೂ ನೀನೆ ಸಖೀ..
ಆವರಿಸು…. ಮೈದುಂಬಿ… ಜಸ್ಟ್ ಮಾತ್ ಮಾತಲ್ಲಿ……

ನಿಮ್ಮವನು,
ಕೇಶವ ಪ್ರಸಾದ್ ಮಾರ್ಗ

Advertisements
 

One Response to “ಇಲ್ಲಿ ಮಾತಲ್ಲೇ ಎಲ್ಲಾ… ಆದ್ರೂ ಮಾತೇ ಇಲ್ಲ!!! (ಜಸ್ಟ್ ಮಾತ್ ಮಾತಲ್ಲಿ)”

  1. ಶ್ರೀಕಾಂತ Says:

    ವಿಚಿತ್ರ ಅಂದ್ರೆ ಈ ಚಿತ್ರದ logical inconsistency! ನೋಡುಗರು ಗಮನಿಸಿರ್ತಾರೆ. ರಾಜೇಶ್ ಮದುವೆಯಾಗೋ ಹುಡುಗಿ ಹೆಸರು ತನು ಅಂತ ಗೊತ್ತಿರಲ್ವ? ತನು ಅವರ ತಂದೆ ತಾಯಿ ಇತ್ತೀಚೆಗಷ್ಟೆ ಸಿಂಗಾಪುರಕ್ಕೆ ಬಂದಿರ್ತಾರೆ. ಸುದೀಪ್ ಕಥೆ ಹೆಳೋವಾಗ ರಾಜೇಶನಿಗೆ ಇದು ಯಾಕೆ ಹೊಳಿಯಲ್ಲ?

    ಜನ ತಲೆ ಕೆಟ್ಟು ಸಿನೆಮಾ ನೊಡ್ತಾರೋ ಏನ್ ಕಥೆ?


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s