
ಝೆನ್ ಧ್ಯಾನದ ಮಾದರಿ...
ಝೆನ್ ವಿದ್ಯಾರ್ಥಿಗಳು ಕನಿಷ್ಠಪಕ್ಷ ಹತ್ತು ವರ್ಷ ಶಿಷ್ಯವೃತ್ತಿ ಮಾಡಿದ ಮೇಲಷ್ಟೆ ಇತರರಿಗೆ ಬೋಧಿಸುವ ಗುರುಗಳಾಗುತ್ತಾರೆ. ತೆನೋ ಎಂಬಾತ ತನ್ನ ಶಿಷ್ಯವೃತ್ತಿ ಮುಗಿಸಿ ಗುರುವಾಗಿ ಹಿರಿಯ ನಾನ್ ಇನ್ ಬಳಿಗೆ ಬಂದಿದ್ದ. ಅಂದು ಬಹಳ ಮಳೆ. ತೆನೋ ಹೊರ ಕೋಣೆಯಲ್ಲಿ ತನ್ನ ಮರದ ಚಪ್ಪಲಿಗಳನ್ನೂ ಕೊಡೆಯನ್ನೂ ಇಟ್ಟು ಒಳಬಂದು ನಾನ್ ಇನ್ಗೆ ನಮಸ್ಕರಿಸಿದ. “ನಿನ್ನ ಚಪ್ಪಲಿ ಮತ್ತು ಕೊಡೆ ಹೊರಗೆ ಬಿಟ್ಟು ಬಂದಿದ್ದೀಯೆ. ನಿನ್ನ ಕೊಡೆ ಚಪ್ಪಲಿಗಳ ಎಡಗಡೆಗೆ ಇದೆಯೋ, ಬಲಗಡೆಗೋ?” ಎಂದು ನಾನ್ ಇನ್ ಕೇಳಿದ.
ತೆನೋ ಗೊಂದಲಗೊಂಡ. ಪ್ರತಿಕ್ಷಣವೂ ಝೆನ್ ಎಚ್ಚರವನ್ನಿಟ್ಟುಕೊಳ್ಳುವುದು ತನಗೆ ಸಾಧ್ಯವಾಗಿಲ್ಲ ಎಂದು ಅರಿತ. ನಾನ್ ಇನ್ ಬಳಿ ಇನ್ನೂ ಆರು ವರ್ಷವಿದ್ದು ಪ್ರತಿಕ್ಷಣ ಝೆನ್ ಸಾಧಿಸಿದ.
[ಸಾಕ್ಷಾತ್ಕಾರ ಎಂದೋ ಒಮ್ಮೆ ಆಗಿ ಮುಗಿದುಬಿಡುವುದಲ್ಲ, ಪ್ರತಿಕ್ಷಣವೂ ಸಂಭವಿಸುತ್ತಿರಬೇಕು, ಅಲ್ಲವೇ?]
Like this:
Like ಲೋಡ್ ಆಗುತ್ತಿದೆ...
Related
A good lesson for those who have ego.
Good one, for those who never concentrate on there work.
‘ಶಂಕರ ಪ್ರಸಾದ ‘ ಅವ್ರೆ..,
ಇನ್ನೂ ಅವರ ಬಗ್ಗೆ ತಿಳಿಸಿರಿ..
Blog is Updated:http://manasinamane.blogspot.com
ನಿಜವಾಗ್ಲು ದುರಹಂಕಾರಿಗಳು ಇದನ್ನ ಸಾರಿ .. ಸಾರಿ… ಓದಬೇಕು!!!!
ಜೀವನಕ್ಕೆ ಕೊನೆ ಇದೆ……
ಆದ್ರೆ ವಿದ್ಯೆಗೆ ಕೊನೆ ಇಲ್ಲ,,,,,,,,,,,,,,,,,,,,,,,,,,,,,,,,,,,