ಸಿಹಿ ಮಾತು

ಇದು ಮನಸುಗಳ ಮಾತು

3 ಈಡಿಯಟ್ಸ್…. ಆಲ್ ಈಸ್ ನಾಟ್ ವೆಲ್!!!! ಜನವರಿ 26, 2010

ಥ್ರೀ ಈಡಿಯಟ್ಸ್ ಆಲ್ ಈಝ್ ವೆಲ್....

3 idiots.. ಇತ್ತೀಚಿಗೆ ಸಿಕ್ಕಾಪಟ್ಟೆ ಹುಚ್ಚೆಬ್ಬಿಸಿರೋ ಬಾಲಿವುಡ್ಡಿನ ಚಿತ್ರವೇನೋ ಹೌದು… 3 ದಿನಕ್ಕೆ 65 ಕೋಟಿ ಗಳಿಸಿರುವುದೂ ನಿಜವಿರಬಹುದು… ಆದರೆ ಒಂದು ಸಾಮಾನ್ಯ ಚಿತ್ರಕ್ಕೆ ಯಾಕೆ ಈ ಥರ Hype Create ಮಾಡಿದ್ದಾರೋ ದೇವರಿಗೇ ಗೊತ್ತು… ಹೌದು ನೀವಿದನ್ನು ನೋಡಿಲ್ಲ ಅಂದರೆ ಖಂಡಿತಾ ಏನನ್ನೋ ಮಿಸ್ ಮಾಡ್ಕೊಂಡಿದ್ದೀರಾ ಅಂತ ನೀವಂದ್ಕೋತಾ ಇದ್ರೆ ಅದು ಸುಳ್ಳು!!!! ಆದ್ರೆ ನಿಮ್ಗೆ ಸಮಯ ಇದ್ರೆ,ಸಹನೆ ಇದ್ರೆ ಇದನ್ನ ಒಮ್ಮೆ ನೋಡಕ್ಕಂತೂ ಅಡ್ಡಿಯಿಲ್ಲ…

ವೀರು ಸಹಸ್ರಬುದ್ಧೆ.. ಯಾನೇ ವೈರಸ್... ಕಾಲೇಜಿನ ಕುಲಪತಿ!!!


ಇದು ಮುಖ್ಯವಾಗಿ 3 ಜನ ಕಾಲೇಜು ವಿದ್ಯಾರ್ಥಿಗಳ ಕಾಲೇಜು ಜೀವನದ ಮೇಲೆ ನಿಂತಿರೋ ಕಥೆ… ಇವರು ಮೂವರೂ ಕೂಡಾ ಪ್ರಪಂಚದ ಎಲ್ಲಾ ವಿದ್ಯಾರ್ಥಿಗಳ ಪ್ರತಿಬಿಂಬದಂತೆ ಕಾಣಿಸ್ತಾರೆ ಅನ್ನೋದೆ ಇಲ್ಲಿನ ಹೆಚ್ಚುಗಾರಿಕೆ. ಚಿತ್ರದ ಹೆಚ್ಚಿನ ಭಾಗ ಕೂಡಾ ಕಾಲೇಜು,ಹಾಸ್ಟೆಲ್ ಸುತ್ತಲೇ ಗಿರಕಿ ಹೊಡೀತಾ ಇರತ್ತೆ. ಕಾಲೇಜು ವಿದ್ಯಾರ್ಥಿಗಳ ತರ್ಲೆ,ಹುಚ್ಚಾಟ, ಪ್ರೊಫೆಸರರ ಪೇಚಾಟ ನಿಮ್ಗೆ ನಗು ತರಿಸತ್ತೆ. ವಿದ್ಯಾರ್ಥಿಗಳಾಗಿ ಅಮೀರ್,ಮಾಧವನ್ ಮತ್ತು ಶರ್ಮಾನ್ ಜೋಶಿ ಮಿಂಚಿದ್ರೆ… ಬೋಮನ್ ಇರಾನಿ ಕಾಲೇಜ್ ನ ಡೀನ್ ಪಾತ್ರವನ್ನ ಸಂಪೂರ್ಣವಾಗಿ ಆವಾಹಿಸಿಕೊಂಡಿದ್ದಾರೆ… ಜತೆಗೆ ಕರೀನಾ ಕಪೂರ್ ಕೂಡಾ ಜೀವ ತುಂಬಿ ಅಭಿನಯಿಸಿದ್ದಾರೆ… ಒಟ್ನಲ್ಲಿ ಅಮೀರ್ ಚಿತ್ರ ಅಂದ್ರೆ ಜನ ಏನು ಬಯಸ್ತಾರೋ ಅದನ್ನೇ ನಿರ್ದೇಶಕ ರಾಜ್ ಕುಮಾರ ಹೀರಾನಿ ಕೊಟ್ಟಿದ್ದಾರೆ ಅಂದ್ರೆ ತಪ್ಪಲ್ಲ…

ಮೂವರು ಈಡಿಯಟ್ಸ್ ಗಳ ಅದ್ಭುತ ನಟನೆಯ ನೋಟ...


ಆದ್ರೆ ಪ್ರೇಕ್ಷಕರನ್ನ ನಗಿಸ್ಲೇ ಬೇಕು ಅಂತ ಹಠಕ್ಕೆ ಬಿದ್ದು ಒಂದು ಚಿತ್ರ ಮಾಡಿದ್ರೆ ಯಾವೆಲ್ಲ ಅವಾಂತರ ಆಗ್ಬಹುದೋ ಅವೆಲ್ಲಾ ಇಲ್ಲಿ ಆಗಿವೆ… ಅದಕ್ಕೆ ಹಾಸ್ಟೆಲ್ ನ ತರ್ಲೆಗಳು ಕೆಲ ಬಾರಿ ಅತೀ ಅನ್ನಿಸುತ್ತದೆ…. ಇನ್ನೊಂದು ಹೇಳಲೇ ಬೇಕಾಗಿರೋದು… ಕರೀನಾ ಅಮೀರ್ ಮತ್ತು ಗೆಳೆಯರ ಕೈಯಲ್ಲಿ ಹೆರಿಗೆ ಮಾಡ್ಸೋದು… ಅದೂ ಕೂಡಾ ಇಂಟರ್ನೆಟ್ ಮೂಲಕ!!!!!! ಇದರಲ್ಲಿ ಒಂದು ಕಮರ್ಶಿಯಲ್ ಸಿನಿಮಾದ ಎಲ್ಲಾ ಸರಕನ್ನೂ ನಿರ್ದೇಶಕರು ತುಂಬಿದ್ದಾರೆ… ಹಾಸ್ಯ,ಕಣ್ಣೀರು ತರ್ಸೋ ಸೆಂಟಿಮೆಂಟ್ಸ್,ನೆನಪಿಡಬಹುದಾದಂತ ಹಾಡುಗಳು… ಒಳ್ಳೆ Message ಕೂಡಾ… ಸಿನಿಮಾ ನೋಡಿದ ನಂತ್ರಾನು ನಿಮ್ಗೆ ಅದ್ರಲ್ಲಿ ಹೇಳಿರೋ Message ಅರ್ಥ ಆಗಿದೆ ಮತ್ತು ಹೌದು ಅನ್ಸಿದ್ರೆ ನಿಜವಾಗ್ಲೂ ಅವ್ರ ಶ್ರಮ ಸಾರ್ಥಕ…. All Iz Well ಅನ್ನೋದು ಕೇವಲ ಒಂದು Dialog ಅಸ್ಟೆ ಆಗಿ ನಿಮ್ಮ ಬಾಯಲ್ಲಿ ಉಳಿದ್ರೆ ಅದ್ಕೆ ನಿರ್ದೇಶಕರು ಕಥೆಯ ಮೇಲೆ ಹಿಡಿತ ಕಳೆದು ಕೊಂಡಿರುವದೇ ಕಾರಣ ಅಂತ ನೇರವಾಗಿ ಹೇಳಬಹುದು…

ಒಟ್ನಲ್ಲಿ ಹೇಳೋದಾದ್ರೆ ಸಿನಿಮಾ ಏನೋ ಓಕೆ… ಆದ್ರೆ ಕಥೆಯನ್ನ ಬೇರೆಡೆಯಿಂದ ಕದ್ದಿದ್ರೂ ತಮ್ದೇ ಅಂತ ವಾದಿಸಿರೊದು ಯಾಕೆ???
ನಿಮ್ಗೆ ಇದರ ಮೂಲ ಕಥೆ ಯಾವುದು ಅಂತ ಗೊತ್ತಾಗ್ಬೇಕಾದ್ರೆ “ಚೇತನ್ ಭಗತ್ ರವರ 5 Point Some One” ಪುಸ್ತಕಾನ ಒಮ್ಮೆ ಓದಿ… (ಅವೆನ್ಯೂ ರೋಡ್ ಗೆ ಹೋದಾಗೊಮ್ಮೆ ಹೀಗೆ ಕಣ್ಣು ಹಾಯಿಸಿದ್ರೆ ಈ ಪುಸ್ತಕ ನಿಮ್ಗೆ ಆರಾಮಾಗಿ ಸಿಗತ್ತೆ!!!!)
If All is Well watch the movie Once… ದುಡ್ಡು ಇನ್ನೂ ಜಾಸ್ತಿ ಇದೆ ಅನ್ಸಿದ್ರೆ ಇನ್ನೊಮ್ಮೆ ಮತ್ತೊಮ್ಮೆ ನೋಡಿ… (ಆನಂದಿಸಿ ಅಂತ ನಾನು ಹೇಳಲ್ಲ.. ಯಾಕಂದ್ರೆ ಹಳಸಲು ಜೋಕಿಗೆ ಯಾವಾಗಲೂ ನಗಿಸೋಕೆ ಸಾಧ್ಯ ಇಲ್ಲ!!!)

ಗುನ್ ಗುನಾತಿಹೇ ಯೇ ಹವಾ..
ಗುನ್ ಗುನಾತಾ ಹೇ ಗಗನ್..
ಗಾ ರಹಾ ಹೇ ಯೇ ಸಾರಾ ಆಲಮ್…
ಜೂಬೀ ದೋ ಪಾ ರಂಪಂ….

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

5 Responses to “3 ಈಡಿಯಟ್ಸ್…. ಆಲ್ ಈಸ್ ನಾಟ್ ವೆಲ್!!!!”

 1. Nagaraj Says:

  yes. u r right man. kannada blogalli bollywood na discuss madta eradu gr8 job.

 2. Aneesh P V Says:

  Hmm..
  I didn’t get your final openion… is the movie is good r not?!

 3. manju Says:

  All is well.
  But you are also in the same well.
  You should watch the film irrespective of actor, director,make or remake.
  Dont enjoy the film, when you feel the acting, direction,and the story that time only you can get theme of the film.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s