ಸಿಹಿ ಮಾತು

ಇದು ಮನಸುಗಳ ಮಾತು

“ರಾಮ್”….. ಹಳೆ ಗಾನ ಬಜಾನಾ…. ಅದೇ ಪ್ರೇಮ ಪುರಾಣಾ..!!! ಜನವರಿ 3, 2010

Filed under: ನಾನು ನೋಡಿದ ಸಿನಿಮಾ — Keshava Prasad M @ 12:45 ಅಪರಾಹ್ನ
Tags: , , , , ,

ರಾಮ್...Ready for Everything!!!


ರಾಮ್..Ready for Everything… ಅಂತ ಬೋರ್ಡ್ ಹಾಕ್ಕೊಂಡು ಬಂದಿರೋ ಪುನೀತ್ ನ ಹೊಸ ಸಿನಿಮಾ… ಇದು ತೆಲುಗಿನ “ರೆಡಿ”ಮೇಡ್ ತಿನಿಸು… ನಿರ್ದೇಶಕ ಮಾದೇಶ ಅವರು ರಿಮೇಕ್ ಮಾಡ್ಬೇಕಿದ್ರೆ ಸ್ವಲ್ಪಾನೂ ಚೇಂಜ್ ಮಾಡ್ದೆ ತೆಲುಗಿನ ಮಕ್ಕೀ ಕಾ ಮಕ್ಕಿ ಕಾಪಿ ಮಾಡಿ ಕನ್ನಡಿಗರಿಗೆ ಉಣಬಡಿಸಿದ್ದಾರೆ….

ಇಲ್ಲಿ ಪುನೀತ್ ಅಭಿಮಾನಿಗಳಿಗೆ ಬೇಕಾದ ಎಲ್ಲಾ ಸರಕುಗಳೂ ಇವೆ. ಪುನೀತ್ ಮ್ಯಾನರಿಸಂ ನ ಚೆನ್ನಾಗೇ use ಮಾಡಿ ದುಡ್ಡು ಕೊಟ್ಟಿರೋ ಜನಸಾಮಾನ್ಯರಿಗೆ ಮೋಸವಾಗದಂತೆ ಮಾಡಿದ್ದಾರೆ ಅನ್ನೋದೆ ಸಂತೋಷದ ವಿಚಾರ.ಇಲ್ಲಿ ಹರಿಕೃಷ್ಣ ನಿಜವಾಗ್ಲೂ ಚೆನ್ನಾಗೇ ಸಂಗೀತ ನೀಡಿದ್ದಾರೆ, ಜತೆಗೆ ಕೃಷ್ಣಕುಮಾರ್ ಕ್ಯಾಮರಾ ಕೂಡಾ…ಚಿತ್ರದ ಪ್ರತೀ ಫ್ರೇಮನ್ನೂ ಕೂಡಾ ಸಾಧ್ಯವಾದಷ್ಟು ಮಟ್ಟಿಗೆ ಅದ್ದೂರಿಯಾಗಿ ಕಟ್ಟಿಕೊಡಲು ಅವರು ಪ್ರಯತ್ನಿಸಿ ಅದರಲ್ಲಿ success ಕೂಡ ಆಗಿದ್ದಾರೆ… ಅದರ ಜತೆಗೆ ಹೆಚ್ಚು ಗೆರೆ ಮೀರದ ಹಾಸ್ಯ… ನಿಮ್ಮ 2.30 ತಾಸನ್ನ full ಎಂಜೋಯ್ ಮಾಡೋದಕ್ಕಂತೂ ಅಡ್ಡಿ ಇಲ್ಲ.ಆದ್ರೆ ಕೆಲ ಬಾರಿ ಸ್ವಲ್ಪ ನಿಮ್ನ ಹೃದಯಾನ ಕಲ್ಲು ಮಾಡ್ಕೊಂಡು ಲಾಂಗು ಮಚ್ಚುಗಳ ಹಾರಾಟನ ನೋಡಕ್ಕೆ ಕೂಡಾ “ರೆಡಿ”ಯಾಗಿರಿ ಅಷ್ಟೆ!!

ಇನ್ನು ಇಲ್ಲಿನ ಪಾತ್ರಧಾರಿಗಳು… ಹುಂ… ಪುನೀತ್ ಬಗ್ಗೆ ಎರಡನೇ ಮಾತೇ ಇಲ್ಲ.. ಯಾವತ್ತೂ ನಿರ್ದೇಶಕನ ನಟ ಅವನು… ಇನ್ನು ಹೊಸ ಎಂಟ್ರಿ ಪ್ರಿಯಾಮಣಿ.. ನಿಜವಾಗ್ಲೂ ನೋಡೋದಿಕ್ಕಂತೂ ಓಕೆ. ಮತ್ತೆ ಶ್ರೀನಾಥ್,ರಂಗಾಯಣ ರಘು,ಸಾಧು,ದೊಡ್ಡಣ್ಣ.. ಎಲ್ಲಾರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ…

ಇದರಲ್ಲಿನ ಕಥೆ ಹೊಸತೇನೂ ಅಲ್ಲ… ಅದೇ ಹಳೇ ಪ್ರೇಮ ಕಥೆ.. ಖಳನಾಯಕರು ಕೊನೆಗೆ ನಾಯಕನ ಗೆಲುವಿನೊಂದಿಗೆ ಸುಖಾಂತ್ಯ… ಆದರೆ ಚಿತ್ರದುದ್ದಕ್ಕೂ ಇರೋ ಹಾಸ್ಯಾನೇ ಪ್ರೇಕ್ಷಕರನ್ನ ನಗಿಸಿ ಚಿತ್ರಾನಾ ಎಂಜಾಯ್ ಮಾಡೋ ಥರಾ ಮಾಡತ್ತೆ. ಕೊನೆಗೆ ಸ್ವಲ್ಪ ಸೆಂಟಿಮೆಂಟ್ ಕೂಡಾ ಇದೆ ಅನ್ನಿ… ಆದರೆ ಅದು ಅಷ್ಟೇನೂ ಮನಸ್ಸಿಗೆ ನಾಟೋ ಥರಾ ಇಲ್ಲ ಅಂದ್ರೆ ನೀವು ಮೂಲ ತೆಲುಗು ಚಿತ್ರದ ನಿರ್ದೇಶಕರನ್ನ ದೂರಬೇಕಷ್ಟೆ.. ಯಾಕೆಂದ್ರೆ ಇಲ್ಲಿ ನಾನೀಗಾಗ್ಲೇ ಹೇಳ್ದಂತೆ ಇದು ಮೂಲ ಸಿನಿಮಾದಾ ನೇರ ಕನ್ನಡೀಕರಣ ಅಷ್ಟೆ..!!!

ಇದರಲ್ಲಿ ಕೇವಲ ಹಾಸ್ಯ ಮಾತ್ರವಲ್ಲ… ಒಂದೆರಡು ಹಾಡುಗಳೂ ಕೂಡಾ ನೆನಪಲ್ಲಿ ಉಳಿಯುವಂತೆ ಇದೆ… ಒಂದು ಎಲ್ಲರನ್ನೂ ಹುಚ್ಚೆಬ್ಬಿಸೋ…”ಹೊಸಾ ಗಾನ ಬಜಾನಾ….” ಇಲ್ಲಿ ಅಪ್ಪು ಸಿಕ್ಕಾಪಟ್ಟೆ ಕುಣೀತಾ ಇದ್ರೆ ಪ್ರೇಕ್ಷಕರೂ ಅವ್ನ ಜತೆ ಸಿಳ್ಳೆ ಮತ್ತು ತಾಳ ಹಾಕ್ತಾರೆ… ನಾಯಕಿ ಪ್ರಿಯಾಮಣಿ… ‘ಅಪ್ಪು”ಗೆಯಲ್ಲಿ ಸಖತ್ತಾಗೇ ಸ್ಕೋರ್ ಮಾಡ್ತಾಳೆ… ಇನ್ನೊಂದು ಒಳ್ಳೇ ಮೆಲೋಡಿಯಸ್ ಗೀತೆ…”ನೀನೆಂದರೇ ನನಗೆ…” ಸಿನಿಮಾ ಮುಗಿದ ನಂತ್ರಾನೂ ಗುನುಗೋ ಥರಾ ಮಾಡತ್ತೆ ಅಂದ್ರೆ ಅದಕ್ಕೆ ನೀವು ಹರಿಕೃಷ್ಣ ಗೆ ಥ್ಯಾಂಕ್ಸ್ ಹೇಳ್ಬೇಕು…

ಒಟ್ನಲ್ಲಿ ನಿಮ್ಮ ಕಿಡ್ನೀನಾ ಮನೇನಲ್ಲೇ ಬಿಟ್ಬಿಟ್ಟು ಸಿನಿಮಾಗೆ ಹೋದ್ರೆ ಫುಲ್ 2.30 ಗಂಟೆಗಳ ಮಜಾ ಅಂತೂ ಗ್ಯಾರಂಟೀ….
ಆದ್ರೂ ಕೊನೆಗೆ ನಿಮ್ಗೆ ಅನ್ಸೋದು ಈ ರಿಮೇಕ್ ಗಳು ಬೇಕಾ??? ಅದರಲ್ಲಿ ಬರೋ ಲಾಂಗು,ಮಚ್ಚು,ಹೊಡಿ,ಬಡಿ ಇದೆಲ್ಲಾ ಕನ್ನಡ ಪ್ರೇಕ್ಷಕ ಬಯಸ್ತಾನಾ???
ಇರಲಿ ಬಿಡಿ ಅಂತೀರಾ… ಪ್ರೇಕ್ಷಕ ಮಹಾಪ್ರಭು ಒಪ್ಕೊಂಡ್ರೆ ಇನ್ನು ಯಾರೂ ಏನಂದ್ರೂ ಸಿನಿಮಾ 50/100 ದಿನಾ ಓಡೋದನ್ನ ತಡ್ಯೋಕಂತೂ ಆಗಲ್ಲ…

ಪ್ರಣಯಾ ಜನಿಸೋ ಸಮಯಾ.. ಮನಸಿಗು ಮನಸಿಗು ಮಿಲನಾ….
ಕೊನೆಯಾವರೆಗೂ ನಿಲದಾ… ಸೆಲೆಯಿದು ಒಲವಿನ ಕವನಾ…
ಪುನಃ ಪುನಃ ಬಯಸಿ ಸನಿಹಾ
ತರಹ ತರಹ ಹೊಸದೀ ವಿರಹಾ
ಇಷ್ಟ ಆಗೊ ಅರಳೂ ಮರಳೂ… ಇನ್ನೂ ಬೇಕು ಅನಿಸೋ ಅಮಲೂ…
ಮನಸೇ ನಿನ್ನನೂ ಮರೆಯೊ ಮಾತೆಲ್ಲಿದೇ…

ಹುಂ ನನ್ನ ಮನಸ್ಸು ಇನ್ನೂ ಇದನ್ನೇ ಗುನುಗುನಿಸ್ತಾ ಇದೆ…. ನಿಮ್ಗೂ ಅನ್ಸಿದ್ರೆ ಒಮ್ಮೆ Black ನಲ್ಲಾದ್ರೂ ಟಿಕೆಟ್ ತಗೊಂಡು ನೋಡಿ…

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

4 Responses to ““ರಾಮ್”….. ಹಳೆ ಗಾನ ಬಜಾನಾ…. ಅದೇ ಪ್ರೇಮ ಪುರಾಣಾ..!!!”

  1. Aneesh P V Says:

    ನಾನೂ ಸಿನಿಮಾ ನೋಡಿಬಿಟ್ಟು ಹೇಳ್ತಿನಿ….

  2. ಈ ಸಿನಿಮಾ ನನ್ನ ಟೇಸ್ಟಿಗೆ ಸರಿಯಿದೆಯೋ ಹೇಗೆ ನೋಡ್ತೀನಿ

  3. Prabhakar Says:

    If you can’t afford a ticket, download it and watch…:)


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s