ಸಿಹಿ ಮಾತು

ಇದು ಮನಸುಗಳ ಮಾತು

ಶಾಂತಿ ಪ್ರಿಯನಿಗೆ ಅಶಾಂತಿಯ ಬೀಳ್ಕೊಡುಗೆ…. ಜನವರಿ 1, 2010

Filed under: ನನ್ನ ಹರಟೆಗಳು — Keshava Prasad M @ 3:02 ಅಪರಾಹ್ನ
Tags: , , , ,

ಈ ವಿಶ್ಯಾನ ಬರೆಯೋಕೆ ನಂಗೆ ನಿಜವಾಗ್ಲೂ ಬೇಸರವಾಗ್ತಾ ಇದೆ…. ಆದ್ರೆ ಬರೀದೆ ಇರೋಕ್ಕಾಗ್ತಿಲ್ಲ… ಮೊನ್ನೆ 31ಕ್ಕೆ ಬೆಳಗ್ಗೆ ನಮ್ಮ ನಿಮ್ಮೆಲ್ಲರ ಪ್ರೀತಿಯ ವಿಷ್ಣು ಸಾರ್ ಇನ್ನಿಲ್ಲ ಅಂತನ್ನೋ ವಿಶ್ಯಾನಾ ಕೇಳಿ ಎಲ್ಲರೂ ಬೇಸರ ಪಟ್ಲೊಂಡು ಬೇರೆ ಬೇರೆ ರೀತೀಲಿ ಅವ್ರ ದುಃಖಾನಾ ಹೊರ ಹಾಕಿದ್ದೂ ಹೌದು…. ಅದೆಲ್ಲಾ ok… ಆದ್ರೆ ಮತ್ತೆ ನಮ್ಮ ಬೆಂಗಳೂರಲ್ಲಿ ನಡ್ದಿರೋದಿದ್ಯಲ್ಲ.. ಅದು ಶುಧ್ಧ ತಪ್ಪು ಕೆಲ್ಸಾ…

ವಿಷ್ಣು ತಮ್ಮ ಜೀವನದುದ್ದಕ್ಕೂ ಹೇಳ್ತಾ ಇದ್ದಿದ್ದು ಶಾಂತಿ ಮಂತ್ರ… ಅವ್ರೊಬ್ಬ ಶಾಂತಿ ಪ್ರಿಯ… ಅಂಥವರಿಗೆ ಬಂದಿರೋ ಸಾವು ಅಕಾಲಿಕ ಇರ್ಬಹುದು… ಆದ್ರೆ ಯಾರ್ಗೂ ಬರ್ದೇ ಇರೋ ಅಂಥಾದ್ದೇನು ಅಲ್ವಲ್ಲ??? ಇಲ್ಲಿರೋರೆಲ್ಲಾ ಒಂದಲ್ಲಾ ಒಂದು ದಿವ್ಸಾ ಈ ಲೋಕಾನಾ ಬಿಟ್ಟು ಹೋಗ್ಲೇ ಬೇಕು… ಅಂಥಾದ್ರಲ್ಲಿ ಅದನ್ನ ಸಹಜವಾಗೇ ಸ್ವೀಕರಿಸಬೇಕಾದ್ದು ಎಲ್ಲರ ಕರ್ತವ್ಯ ತಾನೇ??? ಅವ್ನು ಎಂಥಾ ಅಭಿಮಾನೀನೇ ಇರ್ಲಿ, ಆ ಮಹಾನ್ ಚೇತನಕ್ಕೆ ಗೌರವ ತರೋ ಥರಾ ನಡ್ಕೋ ಬೇಕಾಗಿದ್ದು ಅವನ ಸಹಜ ಸ್ವಭಾವ ಆಗಿರ್ಬೇಕಾಗಿತ್ತು….. ಆದ್ರೆ ಸಂಜೆ South Bangalore ನಲ್ಲಿ ನಡೆದಿದ್ದು ಪೂರ್ತಿ ಉಲ್ಟಾ…

ಬೆಳಗ್ಗೇನೆ ವಿಷ್ಣು ಅಭಿಮಾನಿಗಳು ಬಸವನಗುಡಿಗೆ ಬಂದಿದ್ರು… ಸಾಕಷ್ಟು ಜನ ಅಂತಿಮ ದರ್ಶನ ಕೂಡಾ ಪಡ್ಕೊಂಡ್ರು.. ಆದ್ರೆ ಕೆಲವ್ರು ಅಲ್ಲಿಗೆ ಬಂದಿಲ್ಲ ನೋಡಿ… ಅವ್ರು ಅಂಥಾ ಅಭಿಮಾನಿಗಳೂ ಆಗಿರಲ್ಲ ಬಿಡಿ…. ಅವ್ರು ಮಾಡಿದ್ದು ಮಾತ್ರ ಶುಧ್ಧ ತರ್ಲೆ ಕೆಲಸಗಳನ್ನ…. ಎಲ್ಲೆಲ್ಲಾ ಅವಕಾಶ ಇದೇನೋ ಅಲ್ಲೆಲ್ಲಾ ಸಿಕ್ಕ ಸಿಕ್ಕ ಬಸ್ಸು/ವಾಹನಗಳಿಗೆ,ಅಂಗಡಿಗಳಿಗೆ ಕಲ್ಲು ತೂರಿ ಸಾಕಷ್ಟು ಹಾನಿ ಮಾಡಿದ್ರು…. ಅಲ್ಲಿಗೆ ಮುಗಿಲಿಲ್ಲ ಕಣ್ರೀ… ಸಂಜೆಗೆ ಅದೆಲ್ಲಿದ್ರೋ ಅಂಥವ್ರು… ಎಲ್ಲಾ ಅಭಿಮಾನ್ ಸ್ಟುಡಿಯೋ ಕಡೆಗೂ ವಕ್ಕರಿಸ್ಕೊಂಡಿದ್ರು ನೋಡಿ…. ಅಲ್ಲೂ ಅಷ್ಟೆ.. ಯಾರನ್ನೂ ಒಳಗೆ ಬಿಡಲ್ಲ ಅಂತ ಗೊತ್ತಿದ್ರೂ ಅಲ್ಲಿಗೆ ಸಾಕಷ್ಟು ಜನ ನಿಜ ಅಭಿಮಾನಿಗಳು ಬಂದಿದ್ರು.. ಪಾಪ ಅವ್ರುಗೂ ಏನೋ ಒಂದು ಆಸೆ ಇರತ್ತೆ ಬಿಡಿ.. ಆದ್ರೆ ಅಲ್ಲಿ ನಂತ್ರ ನಡೆದಿರೊದು ಮಾತ್ರ ಅಕ್ಷಮ್ಯ… ಬೆಂಗಳೂರಿನ ಜನತೆ ಮತ್ತು ಹುಚ್ಚು ಅಭಿಮಾನಿಗಳು ಯಾವ ಥರ ಇರ್ತಾರೆ ಅನ್ನೋದು ಇನ್ನೊಮ್ಮೆ ಸಾಬೀತು ಮಾಡಿ ಬಿಟ್ರು…. ಒಂದಿಪ್ಪತ್ತು ವಾಹನಗಳಿಗೆ ಬೆಂಕಿ, ಪೋಲಿಸರಿಂದ ಲಾಠೀಚಾರ್ಜ್, ಕಾಲ್ತುಳಿತಕ್ಕೆ ಮತ್ತೊಂದಿಷ್ಟು ಜನ ಗಾಯ…. ಬೇಕಾ ಇಂಥಾ ಅಭಿಮಾನ??? ವಿಷ್ಣು ಇಂಥದ್ದನ್ನಾ ಬಯಸ್ತಿದ್ರಾ ಅವ್ರ ಅಭಿಮಾನಿಗಳಿಂದ???

ಒಬ್ಬ ಮಹಾನ್ ನಟನನ್ನ ಕಳ್ಕೊಂಡಾಗ ಆಘಾತ ಆಗೋದು ಸಹಜ.. ಆದ್ರೆ ಅದಕ್ಕಾಗಿ ರೋಡ್ ಬ್ಲಾಕ್ ಮಾಡಿ,ಕಲ್ಲು ತೂರೋದು,ಬೆಂಕಿ ಹಚ್ಚೋದು ಎಲ್ಲಾ ಅಸಹಜ ಅಲ್ವಾ??? ಇದಕ್ಕೆಲ್ಲಾ ಏನು ಕಾರಣ ಅಂತೀರಾ… ಅದೇ ಕಣ್ರೀ… ಕೆಲವ್ರಿಗೆ ಬಿಟ್ಟಿಯಾಗಿ ಹೀರೋ ಆಗೋ ಆಸೆ… ಸ್ವಲ್ಪ ರಾಜಕೀಯದ ಆಸರೆ… ಅಲ್ಲಿಗೆ ಹುಚ್ಚು ಕೋತಿಗಳಿಗೆ ಹೆಂಡ ಕುಡಿಸಿದ್ರೆ ಏನಾಗತ್ತೋ ಅದೇ ಆಗೋದು….(ಸ್ಫೂರ್ತಿ: ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಶ್ಚಿಕ ದಂಶನಂ,ತನ್ಮಧ್ಯೇ ಭೂತ ಸಂಚಾರೇ ಯದ್ವಾ ತದ್ವಾ ಭವಿಷ್ಯತಿ..) ಆದ್ರೆ ಒಂದು ಸಮಾಧಾನದ ವಿಶ್ಯಾ ಅಂದ್ರೆ… ಡಾII ರಾಜ್ ಅವ್ರು ತೀರ್ಕೊಂಡಾಗ ನಡ್ದಿರೋ ಹುಚ್ಚಾಟಗಳಿಗೆ ಹೋಲ್ಸಿದ್ರೆ ಇದು ಸ್ವಲ್ಪ ಕಡ್ಮೇನೆ… ಅಲ್ಲ ನಂಗೆ ಇಲ್ಲಿ ತನ್ಕ ಅರ್ಥ ಆಗ್ದೇ ಇದ್ದಿರೋ ಒಂದು ವಿಶ್ಯಾ ಅಂದ್ರೆ ಮೊನ್ನೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಸಾರಿರೋದು… ಇದು ಸ್ವಲ್ಪ ಜಾಸ್ತಿ ಆಯ್ತು ಅಂತ ನಿಮ್ಗೆ ಅನ್ನಿಸ್ಲಿಲ್ಲ ಅಂದ್ರೆ ನಿಮ್ಗೆ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲ ಅನ್ಕೋಬೇಕಷ್ಟೆ… ಇರ್ಲಿ ಬಿಡಿ.. ಅದನ್ನೆಲ್ಲಾ ಇಲ್ಲಿ ಬರ್ಯೋಕೆ ಹೊರಟ್ರೆ.. ದನದ ಬಗ್ಗೆ ಪ್ರಬಂಧ ಬರೆಯೋಕ್ಕೆ ಹೋಗಿ ತೆಂಗಿನ ಮರದ ಬಗ್ಗೆ ಬರ್ದ ಹಾಗೆ ಆಗುತ್ತಷ್ಟೆ….!!!

ಒಟ್ಣಲ್ಲಿ ಮೊನ್ನೆ ನಮ್ಮ ಪ್ರೀತಿಯ ಒಬ್ಬ ನಾಯಕ ನಟನನ್ನ ಕಳ್ಕೊಂಡ್ವಿ… ಜತೆಗೆ ಇರೋ ಸ್ವಲ್ಪ ಮಾನ ಮರ್ಯಾದೆನಾ ಕೂಡಾ… ಬೇಕಾ ನಮ್ಗೆ ಇಂಥಾ ಅಭಿಮಾನ?? ನಮ್ಮ ಜನ ಯಾವಗ ಇಂಥಾ ಚಿಕ್ಕ ಪುಟ್ಟ ವಿಶ್ಯಗಳ ಬಗ್ಗೆ ಸೀರಿಯಸ್ಸಾಗಿ ಯೋಚ್ನೆ ಮಾಡೋಕೆ ಆರಂಭ ಮಾಡ್ತಾರೋ ಆವಾಗ ಮಾತ್ರ ನಾವು ಒಳ್ಳೇ ನಡವಳಿಕೇನಾ ನಿರೀಕ್ಷಿಸ್ಬಹುದು…. ಅಲ್ಲಿ ತನ್ಕಾ???? ಇದ್ದೇ ಇದ್ಯಲ್ಲ… ನನ್ನಂತಾ ಕೆಲ್ಸ ಇಲ್ದಿರೋ ಕೆಲವ್ರು ಸಿಕ್ ಸಿಕ್ಕ ಕಡೆ ಇದರ ಬಗ್ಗೆ ಕೊರೀತಾ ಇರ್ತಿವಿ… ನಿಮ್ಮಂಥಾ ಸಹೃದಯಿಗಳು ತಮ್ಮೆಲ್ಲಾ ಕೆಲ್ಸಗಳನ್ನ ಬಿಟ್ಟು ಇಂಥದ್ದನ್ನಾ ಓದ್ತಾ/ಕೇಳ್ತಾ… ಸುಮ್ನಾಗ್ತೀರಾ… ಅಷ್ಟೆ….!!!

ಇರುವುದೆಲ್ಲವ ಬಿಟ್ಟು,ಇರದುದರೆಡೆಗೆ ತುಡಿವುದೆ ಜೀವನ… so.. ನಾಳೆಯ ಒಳ್ಳೆಯ ದಿನಗಳಿಗಾಗಿ ಹಂಬಲಿಸುವುದರಲ್ಲಿ ಯಾವ ತಪ್ಪಿಲ್ಲ..
ಆ ಅಗಲಿದ ಮಹಾನ್ ಚೇತನ ಈ ಪುಂಡ ಅಭಿಮಾನಿಗಳನ್ನ ಕ್ಷಮಿಸಲಿ.. ಮತ್ತು ಅವರಿಗೆ ಸದ್ಬುದ್ಧಿಯನ್ನ ನೀಡಲಿ ಅನ್ನೋದೇ ನನ್ನ ಆಶಯ…

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s