ಸಿಹಿ ಮಾತು

ಇದು ಮನಸುಗಳ ಮಾತು

ಕೋಡಗನ ಕೋಳಿ ನುಂಗಿತ್ತಾ…. ಸಿ.ಅಶ್ವತ್ ಗೆ ನುಡಿ-ಚಿತ್ರ ನಮನ…. ಡಿಸೆಂಬರ್ 30, 2009

ಈ ಪ್ರೀತಿ ಈಗ ನೆನಪು ಮಾತ್ರ...


ತೆರೆದೆರೆನಾ... ರೆ ರೇ.. ರೇ.. ನಾ.....
ಉಳುವಾ ಯೋಗಿಯ ನೋಡಲ್ಲಿ..... ಸುಗಮ ಸಂಗೀತದ ಮುಳುಗಿದ ಸೂರ್ಯ...We Miss U

ದೊರೆತ ಪ್ರಶಸ್ತಿಗಳು ಹಲವಾರು....

ಒಂದು ಅಪರೂಪದ ಚಿತ್ರ...

ಅಶ್ವಥ್ ಅವರಿಂದಾಗೇ… ಕರ್ನಾಟಕದ ರೈತರ ನಾಡಗೀತೆ ಅಂತ ಗುರುತಿಸಲ್ಪಟ್ಟ ಮತ್ತು ಅವರ ಹಾಡುಗಳಲ್ಲಿ ನಂಗೆ ಇಷ್ಟವಾದ ಒಂದು ಗೀತೆ ಇಲ್ಲಿ ನಿಮಗಾಗಿ.. ಮತ್ತು ನನ್ನ ಕಂಬನಿಗಾಗಿ…

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗೀ
ಉಳುವಾ ಯೋಗಿಯ ನೋಡಲ್ಲಿ ||

ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||
ಉಳುವಾ ಯೋಗಿಯ ನೋಡಲ್ಲಿ ||

ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||
ಉಳುವಾ ಯೋಗಿಯ ನೋಡಲ್ಲಿ ||

ಅಶ್ವಥ್ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪುಗಳು ಸದಾ ನಮ್ಮ ಜೊತೆ ಅವರು ಹಾಡಿದ ಅಮರವಾದ ಗೀತೆಗಳ ಜತೆ ಇದ್ದೇ ಇರತ್ತೆ…

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

2 Responses to “ಕೋಡಗನ ಕೋಳಿ ನುಂಗಿತ್ತಾ…. ಸಿ.ಅಶ್ವತ್ ಗೆ ನುಡಿ-ಚಿತ್ರ ನಮನ….”

  1. Keshava Prasad M Says:

    Ashwath…. We Miss u… ಕಳೆದು ಹೋದ ಅನರ್ಘ್ಯ ರತ್ನ…. ಕನ್ನಡಕ್ಕೆ ಮತ್ತು ಸುಗಮ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ…

    ನಿಮ್ಮವ,
    ಕೇಶವ ಪ್ರಸಾದ್ ಮಾರ್ಗ

  2. sunil.v Says:

    May god give peace to the eternal soul of C.Ashwath.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s