ಸಿಹಿ ಮಾತು

ಇದು ಮನಸುಗಳ ಮಾತು

ಸೂಪರ್ ಸ್ಟಾರ್ ಆಫ್ ಕರ್ನಾಟಕ…. ಬೇಕಾ ಇಂಥಾ ನಾಟಕ??? ಡಿಸೆಂಬರ್ 27, 2009

Filed under: ನನ್ನ ಹರಟೆಗಳು — Keshava Prasad M @ 5:40 ಅಪರಾಹ್ನ
Tags: , ,


Super Star Of Karnataka.. ನಾನಲ್ಲ ಬಿಡಿ…. ಇದು ಏನಂದ್ರೆ ನಮ್ಮ 24 ಕ್ಯಾರೆಟ್ ಮನರಂಜನೆ!!! ಕೊಡೋ ಸುವರ್ಣ ಛಾನೆಲ್ ನಲ್ಲಿ ಪ್ರಸಾರ ಆಗೋ ಒಂದು so called talent hunt program….. ಈಗ ಯಾವ್ದೇ ಛಾನೆಲ್ ಹಾಕಿ ಒಂದಲ್ಲಾ ಒಂದು ಇಂಥಾ ಕಾರ್ಯಕ್ರಮ ಬರ್ತಾನೆ ಇರತ್ತೆ ಇದ್ರಲ್ಲೇನು ವಿಶೇಷ ಅಂತೀರಾ???? ಯಾವತ್ತೂ ಇಂಥಾ ವಿಶೇಷ ಇರತ್ತೋ ಇಲ್ವೋ ನಂಗೊತ್ತಿಲ್ಲ… But ಇವತ್ತಂತೂ ಇತ್ತು!!!! ನಾನು TV ನೋಡೋದೆ ಕಡ್ಮೆ… ಅದ್ರಲ್ಲೂ ಇಂಥಾ ಕಾರ್ಯಕ್ರಮ ನೋಡೋನೇ ಅಲ್ಲ…. ಆದ್ರೆ ಇವತ್ತು ನಿಮ್ ಪುಣ್ಯಾನೋ ಅಲ್ಲ ನನ್ ಕರ್ಮಾನೋ ಈ ಕಾರ್ಯಕ್ರಮನಾ ನೋಡ್ಬಿಟ್ಟೆ… !!!

ಜನಕ್ಕೆ ಹುಚ್ಚು ಇರತ್ತೆ… ಅದ್ರಲ್ಲೂ ಒಬ್ಬೊಬ್ರಿಗೆ ಒಂದೊಂದ್ ಥರಾ ಅಂಥಾ ನಮ್ಗೆಲ್ಲಾ ಗೊತ್ತಿರೋದೇ… ಆದ್ರೆ ಈ ಥರಾನೂ ಇರತ್ತೆ ಅಂತ ನಂಗೆ ಗೊತ್ತಾಗಿದ್ದು ಇವತ್ತೇ… ಇವತ್ತಿನ episode ಯಾಕೋ ವಿಚಿತ್ರಾನೆ ಅನ್ನಿಸ್ತಾ ಇತ್ತು… ನೀವು ನೋಡಿದ್ರೆ ನಿಮ್ಗೂ ಅನ್ಸಿರ್ಬೋದು. ಇವತ್ತು ಒಬ್ಬ so called ಸ್ಪರ್ಧಿ Emotional Song ಅಂತ ಹೇಳ್ಕೊಂಡು ಅತೀ ಅನ್ನೋಥರ ಡಾನ್ಸ್ ಮಾಡ್ಬಿಟ್ಟ ಕಣ್ರೀ… ಅದಕ್ಕೆ ಡಾನ್ಸ್ ಅಂದೋರಿಗೂ, ಅಲ್ಲಿ ಅಂಥದಕ್ಕೆ ಅವಕಾಶ ಕೊಟ್ಟೋರಿಗೂ ಎನನ್ಬೇಕು ಅಂತಾನೇ ನಂಗೆ ಗೊತ್ತಾಗ್ತಿಲ್ಲ… ಯಾವ್ನೋ ಒಬ್ಬ ಶ್ಯಾಮಸುಂದರ ಅಂತೆ… Emotional Song ಅಂತ ಹೆಚ್ಚು ಕಡ್ಮೆ 50 Tube lightಗಳನ್ನ ತನ್ನ ಮೈಮೇಲೆ ಒಡೀತಾ ಹುಚ್ಚುಚ್ಚಾಗಿ ಕುಣೀತಾ ಇದ್ರೆ, ಅಲ್ಲಿರೋ ಯಾವೊಬ್ನೂ ಮಾತಾಡ್ದೆ ಚಪ್ಪಾಳೆ ತಟ್ಟುತ್ತಾ ಕುಳಿತಿದ್ರು(at least ಒಂದಿಬ್ರು ನೋಡಕ್ಕಾಗ್ದೆ ಕಣ್ ಮುಚ್ಕೊಂಡಿದ್ರು) ಅಂದ್ರೆ ಇದಕ್ಕೆ ಏನಂತೀರಾ??? ಛಾನೆಲ್ ನವ್ರಿಗಂತೂ ಇದೂಕೂಡಾ TRP ಹೆಚ್ಚಿಸ್ಕೊಳ್ಳೋ ಒಂದು ಅವಕಾಶದ ಥರ ಕಂಡಿರತ್ತೆ, ಜಡ್ಜಸ್ ಗೆ ಯಾವ ಥರಾ ಕಂಡಿರತ್ತೆ ಅಂತ ನಾನು ಹೇಳಕ್ಕೆ ಬರಲ್ಲ. ಅಲ್ಲ ಇದೆಲ್ಲ ಮಾಡಕ್ಕೆ ಅವ್ನೇನು ಅಲ್ಲಿ Guinness Record ಗಾ try ಮಾಡ್ತಿದ್ದಾನೆ??? ಮನೆ ಮಂದಿ ಎಲ್ಲಾ ಕೂತು ನೋಡೋ ಕಾರ್ಯಕ್ರಮ ಯಾವ ಥರಾ ಇರ್ಬೇಕು ಅನ್ನೋ ಪರಿಜ್ಞಾನ ಇಲ್ಲದಿದ್ರೆ, ಅಥವಾ ಕೇವಲ ದುಡ್ಡೇ ಮುಖ್ಯವಾದಗ ನೀವು ಇಂಥಾ ಕಾರ್ಯಕ್ರಮ ಬಿಟ್ಟು ಬೇರೆನನ್ನ expect ಮಾಡಕ್ಕೆ ಸಾಧ್ಯ??? ಛಾನೆಲ್ ನವ್ರ ಪುಣ್ಯಾನೋ ಅಥವಾ ಆ ಪೋಲಿ ಹುಡುಗನ ಸೌಭಾಗ್ಯಾನೋ ಹೆಚ್ಚೇನು ಗಾಯಗಳಿಲ್ಲದೇ ಅವ್ನ ಹುಚ್ಚಾಟ ಮುಗೀತು, ಅದನ್ನ ನೋಡಿದ ಪ್ರೇಕ್ಷಕರೂ ಕೂಡಾ ಅದೇ ನಿಜವಾದ ಡಾನ್ಸ್ ಅಂತ ಅವನನ್ನ ಮುಂದಿನ ಸುತ್ತಿಗೆ ಕಳಿಸಿದ್ರು ಕೂಡಾ!!! (ಅಥವಾ ಪ್ರೇಕ್ಷಕರು ಅವನಿಂದ ಇನ್ನೂ ಹೆಚ್ಚಿನದನ್ನ ಮುಂದಿನ ಕಂತುಗಳಲ್ಲಿ ನಿರೀಕ್ಷಸಿದ್ದಾರೋ???)

ಆದ್ರೆ ನಂಗೆ ಇಲ್ಲಿ ನಿಜವಾಗ್ಲೂ ಸಂತೋಷ ಕೊಟ್ಟಿದ್ದು ಜಡ್ಜಸ್ ನಿರ್ಣಯ. ಅವ್ರು (ದೇವರಾಜ್ ಮತ್ತು ಪ್ರಿಯಾಂಕಾ) ಸರಿಯಾದ ರೀತಿನಲ್ಲೇ ಇವ್ನ ಹುಚ್ಚಾಟನ ಖಂಡಿಸಿದ್ರು. ಅದಕ್ಕೆ ಅವ್ರಿಗೆ hats off ಹೇಳ್ಳೇ ಬೇಕು… ಇಂಥಾ ಜಡ್ಜಸ್ ಇದ್ರೆ ಮಾತ್ರಾ ಸ್ವಲ್ಪಾನಾದ್ರು ನೆಮ್ಮದಿಯಿಂದ ಜನ TV ನೋಡ್ಬೋದು… ಆದ್ರೆ ಇಂಥಾ ಹುಚ್ಚುತನಗಳು ಇಲ್ಲಿಗೆ ನಿಲ್ಲತ್ತೆ ಅಂತ ಅಲ್ಲ… ಈ ಸರಣಿಯಲ್ಲಿ ಇನ್ನು ಬರಲ್ಲ ಅನ್ನೋ ಒಂದು ನಂಬಿಕೆ ಅಷ್ಟೆ.ಎಲ್ಲಿ ತನ್ಕ ಜನ Name and Fame ಹಿಂದೆ ಬೀಳ್ತಾರೋ ಅಲ್ಲಿ ತನ್ಕ ಇಂಥಾ ಹುಚ್ಚಾಟಗಳು ನಡೀತಾನೆ ಇರತ್ತೆ.
ಜನ ಸಾಧನೆ ಮಾಡ್ಬೇಕು, ಮಾಡ್ಬಾರ್ದು ಅಂತ ನಾನು ಅಂತಿಲ್ಲ… ಆದ್ರೆ ಯಾವ ಸಾಧನೆ/ಕೆಲ್ಸಾ ನ ಎಲ್ಲಿ ಮಾಡ್ಬೇಕೋ ಅಲ್ಲೇ ಮಾಡ್ಬೇಕು…. ನೀವೇನಂತೀರಾ???

ಒಟ್ನಲ್ಲಿ ಇವತ್ತು ಸುವರ್ಣವಾಹಿನಿಯವರಿಗೂ ಸಂತೋಷ, ನೋಡಿದ ನಮಗೂ ಸಂತಾಪ… ದೇವರು ಎಲ್ಲರಿಗೂ ಒಳ್ಳೇ ಬುದ್ಧಿ ಕರುಣಿಸಲಿ ಅನ್ನೋದೇ ನನ್ನ ಪ್ರಾಮಾಣಿಕ ಪ್ರಾರ್ಥನೆ…

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

2 Responses to “ಸೂಪರ್ ಸ್ಟಾರ್ ಆಫ್ ಕರ್ನಾಟಕ…. ಬೇಕಾ ಇಂಥಾ ನಾಟಕ???”

  1. Yashavantha Kumar Says:

    u r writing real fact, TV channal navaru e reetiya program ge avakasha maadi kodabardu, janagalige olledannu (Makkalige) spoorthy baruvanthahadanna torisabeku.

    Keep writing…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s