ಸಿಹಿ ಮಾತು

ಇದು ಮನಸುಗಳ ಮಾತು

ಮಾಯಾನಗರಿಯ Two Wheeler ಪ್ರಯಾಣ…. ಡಿಸೆಂಬರ್ 23, 2009

Filed under: ನನ್ನ ಹರಟೆಗಳು — Keshava Prasad M @ 4:46 ಅಪರಾಹ್ನ
Tags: , , , ,

Hmmmmm…. ನಂಗೊತ್ತು ನಿಮ್ಗೆ ಈಗಾಗ್ಲೆ ಗೊತ್ತಾಗಿರತ್ತೆ ನಾನು ಯಾವ ನಗರದ ಬಗ್ಗೆ ಹೇಳಕ್ಕೆ ಹೊರಟಿರೋದು ಅಂತ…. ಅದೇರೀ… ಇನ್ಯಾವದು ನಮ್ಮ ಮಾಯಾನಗರಿ…. ಕೆಂಪೇ ಗೌಡರ ನಗರ… ಈಗ ನನ್ನ ನಿಮ್ಮಂತ ಜನಸಾಮಾನ್ಯರ ನಗರ ಬೆಂಗಳೂರು ಕಣ್ರೀ…..

ನಾನು ನನ್ನ HUNK ಜತೆಗೆ...

ಇವ್ನಿಗೆ ಇಂಥಾ ಜುಜುಬಿ ವಿಶ್ಯಾ ಬಿಟ್ರೆ ಬೇರೆ ಸಿಗಲ್ವೇನೋ ಅಂತ ನೀವು ಅಂದ್ಕೋತಾ ಇದ್ರೆ ಅದ್ಕೆ ನಾನೇನೂ ಮಾಡಕ್ಕಾಗಲ್ಲಾರೀ… ಆದ್ರೆ ಒಂದು ಮಾತ್ರಾ ನೆನ್ಪಿಟ್ಕಳ್ಳಿ… ಜುಜುಬಿ ಅಂತ ನಾವೇನು ಅಂತೀವಲ್ಲಾ ಅದ್ರಲ್ಲಿ ಸಾವ್ರ ವಿಶ್ಯಾ ಅಡಗಿರತ್ತೆ ಕಣ್ರೀ…

ಇಲ್ಲಿ ದಿನಾ ಕಿಲೋಮೀಟರ್ ಗಟ್ಲೆ ತಿರುಗಾಡೋ ನನ್ನಂತೋರ್ಗೆ ಬೆಂ.ಮ.ನ.ಸಾ ದ ಬಸ್ಸುಗಳು ಅರ್ಥ ಆಗೋದು ಸ್ವಲ್ಪ ಕಷ್ಟಾನೇ… ಈ ಊರಲ್ಲಿ ಹುಟ್ಟಿ ಬೆಳ್ದೋರಿಗೇ ಅದರ ಮಾರ್ಗ,timings ಅಭ್ಯಾಸ ಆಗಿರೋದೇ ಡೌಟಲ್ಲಿರೋವಾಗ ನನ್ನಂಥವರಿಂದ ಅದನ್ನ ನೀವು ನಿರೀಕ್ಷಿಸೋದು ತಪ್ಪಾಗತ್ತೆ. ಅದಕ್ಕಾಗೇ ನಾನು ನನ್ನದೇ ದ್ವಿಚಕ್ರಿನಾ ಉಪಯೋಗಿಸ್ತೀನಿ…. ಹಾಗೆ ದಿನಾ ತಿರ್ಗಾಡೋವಾಗ ಸಿಗೋ ಅನುಭವದ ಬಗ್ಗೇನೇ ನಾನಿಲ್ಲಿ ಸ್ವಲ್ಪ ಕೊರೆಯೋಕೆ, ಕ್ಷಮಿಸಿ ಬರೆಯೋಕೆ ಹೊರಟಿರೋದು…

ಈ Bikeನಲ್ಲಿ ಓಡಾಡ್ತಾರಲ್ಲ ಅವ್ರಲ್ಲಿ ಒಬ್ಬೊಬ್ರಿಗೆ ಒಂದೊಂಥರಾ ಹುಚ್ಚುಗಳಿರತ್ತೆ… ನಂಗೆ ಸಾಧ್ಯವಾದಷ್ಟು ಅಗಲವಾದ,ಸುಂದರವಾದ roadಗಳಲ್ಲಿ..!!!! (ಬೆಂಗಳೂರಲ್ಲಿ ಅದು ಎಲ್ಲಿದೆ ಅಂತ ನಂಗೆ ಕೇಳ್ಬೇಡಿ ಪ್ಲೀಸ್….) ವೇಗವಾಗಿ ಓಡ್ಸೋ ಹುಚ್ಚು… ನಂಗೆ ಈ ಹುಚ್ಚು ಶುರು ಆಗಿರೋದು ನನ್ನ ಕಾಲೇಜು ದಿನಗಳಲ್ಲಿ… ಆದ್ರೆ ಈಗೀಗ ಈ ಮಾಯಾನಗರಿಗೆ ಬಂದ್ಬಿಟ್ಟು ಹುಚ್ಚು ಇಳ್ದೋಗಿ ಬಿಟ್ಟಿದೆ ಬಿಡಿ.. (ನಿಮ್ಹಾನ್ಸ್ ಗೆ ಹತ್ರ ಅಂತಲ್ಲ). ಕೆಲವ್ರಿಗೆ ಅವ್ರ ಸುಂದರವಾದ bikeನ್ನ ಚಿತ್ರ ವಿಚಿತ್ರ ರೂಪಕ್ಕೆ ಬದಲಾಯಿಸಿ ರೋಡ್ ತುಂಬಾ ವಾಲಾಡಿಸ್ಕೊಂಡು ಓಡ್ಸೋ ಹುಚ್ಚು… ಇರ್ಲಿ ಬಿಡಿ ನಂಗೇನು ಅಲ್ವಾ???

ಹೀಗೆ ಚಿತ್ರ ವಿಚಿತ್ರ ಜನರಿರೋವಾಗ ನಿಮ್ಗೆ ಸಾಕಷ್ಟು ಮಜಾ ಸಿಗ್ದೇ ಇರೋಕೇ ಸಾಧ್ಯಾನಾ ಹೇಳಿ??? ಅದೇ ನೀವು ಬೆಂ.ಮ.ನ.ಸಾ ದ ಬಸ್ಸುಗಳಲ್ಲಿ ಒಡಾಡೋರಾದ್ರೆ ಖಂಡಿತಾ ಇದನ್ನೆಲ್ಲಾ ಮಿಸ್ ಮಾಡ್ಕೊತ್ತಿದ್ದಿರಾ…. ನೀವು ಹೀಗೇ bikeನಲ್ಲಿ ಹೋಗ್ತಿದ್ದೀರಾ ಅಂತಿಟ್ಕಳ್ಳಿ… ಪಾಪ ನನ್ ಥರಾ rules ಕೂಡಾ follow ಮಾಡ್ತಿದ್ದೀರಾ ಅಂತಾನೂ ಅನ್ಕಳ್ಳಿ… ಇಷ್ಟೆಲ್ಲಾ ಇದ್ದೂ ಇಲ್ಲಿ ಮಾಯಾನಗರಿಯಲ್ಲಿ Traffic Police ಹಿಡ್ಯೋದು ಯಾರನ್ನ ಅಂತೀರಾ???? exactly..ನಿಮ್ಮನ್ನೇ ಕಣ್ರೀ ನಿಮ್ಮನ್ನೇ… ಯಾಕಂತೀರಾ.. ಯಾಕಂದ್ರೆ ಅವ್ರು fine ಹಾಕಕ್ಕೆ ಅಂತ ನಿಲ್ಸಕ್ಕೆ ಹೇಳ್ದಾಗ ಗೊತ್ತಿದ್ದೂ ಗೊತ್ತಿದ್ದೂ ನಿಲ್ಸೋರೂ ಕೂಡಾ rules follow ಮಾಡೋವಂಥಾ ನೀವು ಮಾತ್ರಾ ಕಣ್ರೀ….!!!
ಇನ್ನೊಂದು ನಂಗೆ ನೆನ್ಪಾಗೋದು ಇಲ್ಲಿನ ವಿಚಿತ್ರ ಅಟೋಗಳು ಮತ್ತು ಅಷ್ಟೇ ವಿಚಿತ್ರವಾಗರೋ ಅದರ ಡ್ರೈವರ್ಗಳು… ದೇವರಾಣೆ ಅವ್ನಿಗೂ ಗೊತ್ತಿರಲ್ಲ ಯಾವ ಕಡೆಗೆ ತಿರುಗುತ್ತಾನೆ ಅನ್ನೋದು!!! ಸ್ವಲ್ಪ ಜಾಗ ಕಂಡ್ರೆ ಸಾಕೂರಿ… ಒಳ್ಳೇ ಅಕ್ರಮ ಸಕ್ರಮದವ್ರು ಬೇಲಿ ಹಾಕ್ಕೊಳ್ಳೋ ಥರಾ ನುಗ್ಗಿ ಬಿಟ್ಟಿರ್ತಾರೆ…. ಅಲ್ಲಿಗೆ traffic full Jam… ಮಜಾ ಅಂದ್ರೆ.. ಇದೇ ಸಮಯದಲ್ಲಿ ನನ್ನಂಥಾ 6 ತಿಂಗಳಿಗೆ ಹುಟ್ಟಿರೋ ಕೆಲ ಬೈಕ್ riderಗಳು ಇನ್ನುಳಿದಿರೋ ಜಾಗನಾ ಆಕ್ರಮಿಸಿ ಬಿಟ್ಟಿರ್ತಾರೆ… ಅಲ್ಲಿಗೆ ಆ ದಾರಿ ಒಂದರ್ಧ ಗಂಟೆ ತನ್ಕ ಬಂದ್…. ಸಾಧ್ಯ ಆದ್ರೆ ಸ್ವಲ್ಪ ಜಗಳಾನು ಆಡ್ಕೋಬಹುದುರೀ…. ಎಲ್ಲಾ free… ಕಾಸಿಲ್ಲ ಏನಿಲ್ಲ… ಹೇಳಿ ಇಂಥದ್ದೆಲ್ಲಾ ನಿಮ್ಗೆ ಬೆಂ.ಮ.ನ.ಸಾ ದ ಬಸ್ಸುಗಳಲ್ಲಿ ಸಿಗತ್ತಾ>>?????

ಇಷ್ಟೆಲ್ಲಾ ಇದ್ರೂ ನಂಗೆ ಈ ಮಾಯನಗರಿಯಲ್ಲಿ Bike ಓಡ್ಸೋದು ಅಂದ್ರೆ ನಿಜಕ್ಕೂ ತುಂಬ ಅಂದ್ರೆ ತುಂಬಾ ಇಷ್ಟ… hehheeh ಇವ್ನಿಗೇನು ಹುಚ್ಚಾ ಅಂತಾ ಅನ್ಕೋಬೇಡಿ… ನಾನ್ ಯಾಕೆ ಹಾಗಂದೆ ಅಂತ ಕೇಳಿದ್ರೆ ನೀವೂ ಕೂಡಾ ಹೌದು ಅಂತೀರ… ಇಲ್ಲಿ Bike/Bus/Car/Auto ಏನೇ ಓಡ್ಸುವಾಗಲ್ಲೂ ಅಲ್ಪ ಸ್ವಲ್ಪ ತಾಗಿಸ್ಕೊಳ್ದೇ ಓಡ್ಸೋದು ಸಾಧ್ಯಾನೇ ಇಲ್ಲ… ಹಾಗಂತ ಅದ್ಕೆಲ್ಲಾ ಇಲ್ಲಿ ಯಾರೂ ಮಾತಡೋದೂ ಇಲ್ಲ… ಇನ್ನೂ ಸ್ವಲ್ಪ ಹೆಚ್ಚೇ Dent ಆಗಿದೆ ಅನ್ಕೊಳ್ಳಿ.. ನೀವು ಸ್ವಲ್ಪ Rough ಅಂತ ಅನ್ಸಿದ್ರೆ 100% ಯಾರೂ ನಿಮ್ ತಂಟೆಗೆ ಬರಲ್ಲ… ಹೇಳಿ Accident ಮಾಡ್ಬಿಟ್ಟೂ ಇಷ್ಟು ಆರಾಮಾಗಿ ಇನ್ನೆಲ್ಲಾದ್ರೂ ನೀವು ಮನೆಗೆ ಹೋಗಕ್ಕೆ ಆಗತ್ತಾ??? ಅದ್ಕೆ ಕಣ್ರೀ ನಂಗೆ ಇಲ್ಲಿ ride ಮಾಡಕ್ಕೆ ಖುಶಿ ಅಂದಿದ್ದು….

ಈ Two Wheeler ಪ್ರಯಾಣ ಇಲ್ಲಿ ಯಾವಾಗ ಬೇಸರ ತರ್ಸುತ್ತೆ ಅಂದ್ರೆ ಒಂದು ಮಳೆ ಬಂದಾಗ, ಇನ್ನೊಂದು ನೀವು 1980 ಅಥವಾ ಅದಕ್ಕಿಂತಾ ಹಳೆ ಮಾಡೆಲ್ ಅಟೋ/ಬಸ್ ಹಿಂದೆ Trafficಲ್ಲಿ ಸಿಕ್ಕಾಕ್ಕೊಂಡಾಗ… ಒಂದನೇದಲ್ಲಿ ಕೆಸ್ರು ಮತ್ತು ನೀರಿನ Problem ಆದ್ರೆ ಇನ್ನೊಂದ್ರಲ್ಲಿ full ಹೊಗೆ ನುಂಗೋ ಸುಮಧುರ ಅನುಭವ… (ಆದ್ರೆ ಬೆಂ.ಮ.ನ.ಪಾ ಬಸ್ ಆದ್ರೆ at least “ಹೊಗೆ ಉಗುಳದ ವಾಹನ ಸೆಳೆವುದು ಎಲ್ಲರ ಗಮನ” ಅಂತಾನಾದ್ರೂ ಬರ್ದಿರ್ತಾರೆ…) ಹೀಗೇ ಹೇಳೋಕೆ ಹೊರಟ್ರೆ ಸಾವ್ರ ಇದೆ. ಆದ್ರೆ ನಿಮ್ ತಲೆ ತಿನ್ನೋಕೆ ನಂಗೆ ಇಷ್ಟ ಇಲ್ಲ…. ಆದ್ರೆ ಒಂದು ವಿಶ್ಯಾ ಹೇಳ್ದೇ ನಾನು ಇದನ್ನ ಮುಗ್ಸಕ್ಕೆ ಅಂತೂ ಆಗಲ್ಲ…
ಅಲ್ಲ ಇಲ್ಲಿ ಇಷ್ಡೊಂದು ಸಾವ್ರ ವಾಹನಗಳಿದೆ, ಅದ್ರಲ್ಲಿ ಅರ್ಧದಷ್ಟು ಅಟೋಗಳಿವೆ… ಆದ್ರೆ ಎಷ್ಟು ಜನ Traffic Rules Follow ಮಾಡ್ತಾರೆ ಹೇಳಿ??? ಹೋಗ್ಲಿ traffic Rules ಬಿಟ್ಟಾಕಿ at least ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯಾನಾದ್ರೂ ಕಡ್ಮೆ ಮಾಡೋಕೆ ಟ್ರೈ ಮಾಡ್ಬೋದಲ್ಲಾ???
ಅದ್ಕೆ ನಾವೆಲ್ಲಾ ಎಲ್ಲೆಲ್ಲಿ ಹೊಗೆ ಜಾಸ್ತಿ ಉಗುಳೊ ವಾಹನ ಕಾಣತ್ತೋ ಅದರ ಮಾಲಿಕರಿಗೆ ಶೇಮ್ ಶೇಮ್ ಅನ್ನಕ್ಕೆ ಆರಂಭ ಮಾಡಿದ್ರೆ ಹೇಗೆ???? ಬೇಡ at least ಹೊಗೆ ಜಾಸ್ತಿ ಬರ್ತಾ ಇದೆ ಅನ್ನೋದನ್ನ ಅವ್ರಿಗೆ ಮನದಟ್ಟು ಮಾಡೋ ಪ್ರಯತ್ನ ಮಾಡಿದ್ರೆ ಹೇಗೆ???

ಬೆಕ್ಕಿಗೆ ಗಂಟೆ ಕಟ್ಟೋರು ಯಾರು ಅಂತೀರಾ???? ಹ ಹಾ ಹಾ….

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

3 Responses to “ಮಾಯಾನಗರಿಯ Two Wheeler ಪ್ರಯಾಣ….”

  1. Pavi Says:

    Boss…Super.. i have same experience ..with u and ur bike only …thank you this type of good messages…

  2. Ravi Says:

    Gurugale.. same prob in Hyd .. Hale auto galu gadavada hoge bidtha iruthe.. adru police nanna KA registration nodi nanna bikena nilisthane horathu aa dakota auto kade gamanane kodolla… guess we have to take down the no. of auto and mail to RTO

  3. Aneesh P V Says:

    ಸೂಪರ್ ಗುರೂ…
    ನಮ್ಮ ಜನ ಸರಿಯಾಗಿ ಟ್ರಾಫಿಕ್ಕನ್ನೇ ಫೋಲೋ ಮಾಡಲ್ಲ(ಓವರ್ ಟೇಕ್) ಇನ್ನು ರೂಲ್ಸ್ ಎಲ್ಲಿ ಫೋಲೋ ಮಾಡ್ತಾರೆ ಬಿಡು ಮಚ್ಚಾ….


Leave a reply to Aneesh P V ಪ್ರತ್ಯುತ್ತರವನ್ನು ರದ್ದುಮಾಡಿ