ಸಿಹಿ ಮಾತು

ಇದು ಮನಸುಗಳ ಮಾತು

ಮೂಕಧ್ವನಿ ಡಿಸೆಂಬರ್ 10, 2009

Filed under: ಅನಿನಾದ — ಅನಿಶ್ ಪಿ ವಿ @ 5:18 ಅಪರಾಹ್ನ

ನಿಡುಸುಯ್ಯುವ ತಂಗಾಳಿಗೆ
ಅಲೆ ಅಲೆಗಳ ಚುಂಬನ
ಮಳೆಸೂಸಿ ಬೊಬ್ಬಿಡುವ  ಮೋಡಗಳಂತೆ
ದಿಕ್ಕು ದಿಕ್ಕಿಗೂ ಚದುರಿದೆ ಮೌನ

ಅಲೆಯುವ ಮನ ಅಲೆಯುತ್ತಲೇ ಇದೆ
ಈ ಹೂವಿಗು ಆ ದುಂಬಿಗು
ಒಡಮೂಡಿದೆ ಚೇತನ

ನೀಲ ಗಗನದ ನೀಲಿಮೆಯೆಲಿ
ಮರದ ಹನಿ ಹನಿಗಳಲಿ
ಹಸಿರಾಯಿತು ಈ ಚಣ-ನನ್ನಲಿ
ನವ ಭಾವ-ವಿತಾನ

ಮೊಗದ ಮೇಲೆ ನಗೆಯೆ ಇಲ್ಲ
ಮಾಸಿದ ಮುಖ ಛಾಯೆ
ನೆನಪುಗಳೊ ಒಳದನಿಯ ಸೀಳುವವು
ಒಲುಮೆ ನಲುಮೆಗಳ ಸಂದೆಶಗಳೊಂದಿಗೆ
ದೂರದ ಮಣ್ಣಿನ ನೆನಪು ಮಾಸದ ಹಾಗೆ
ಈ ಬದುಕೇ ಹೀಗೆ…!

ಈ ಬದುಕೇ ಹೀಗೆ ; ನದಿಯ ಹಾಗೆ
ಮೂಲದಲಿ ಅಕ್ಷಯ-ಒರತೆ
ನೆನಪುಗಳೂ ತೆರೆದುಕೊಳ್ಳುತ್ತವೆ
ತಂಗಾಳಿ ಬೀಸಿ ಮಾಯವಾಗುತ್ತದೆ
ಒಮ್ಮೆಲೇ ಬರಡಾಗುವ ಮನ
ಮುರಿಯುವುದು ಮೌನ.

Advertisements
 

3 Responses to “ಮೂಕಧ್ವನಿ”

  1. Keshava Prasad M Says:

    I am happy that I got one good partner….. u rock man…..

  2. Anutya H R Says:

    Elli ella bareeteera marayare… hmm very good one.

  3. Bharath Kumar Says:

    Very good, keep it up. Heartly welcome for those good ones.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s