ಸಿಹಿ ಮಾತು

ಇದು ಮನಸುಗಳ ಮಾತು

ಮನಸಾರೆ ಮತ್ತು ಕಾಮನಬಿಲ್ಲು…… ಡಿಸೆಂಬರ್ 1, 2009

“ಮನಸಾರೆ”…. ಯೋಗರಾಜ ಭಟ್ಟರ ಇನ್ನೊಂದು ಕನಸಿನ ಕೂಸು…. ಅದರಲ್ಲಿ ಅವರು ಮತ್ತು ಅವರ ತಂಡದ ಶ್ರಮ ಎದ್ದು ಕಾಣುತ್ತಿರುವುದೂ ನಿಜ….
ಆದರೆ ಒಂದು success ಅನ್ನೋದು ಒಬ್ಬ ನಿರ್ದೇಶಕನನ್ನ ಯಾವ ಥರ ಹಿಂಡಿ ಹಾಕತ್ತೆ ಅನ್ನೋದನ್ನ ಕೂಡಾ ಇದೇ ಸಿನಿಮಾ ಹೇಳುತ್ತಿರುವುದು ಕೂಡಾ ಅಷ್ಡೇ ನಿಜ…!!!

ಒಬ್ಬ ಕೆಲಸವಿಲ್ಲದೇ ಅಲೆದಾಡೊ ಹುಡುಗ…. ಅವನಿಗೆ ಒಬ್ಬ ಅದೇ ಥರದ ಗೆಳೆಯ… ಮನೆಯಲ್ಲಿ ಸದಾ ತೆಗಳುತ್ತಾ ಇರೋ ಚಿಕ್ಕಪ್ಪ ಚಿಕ್ಕಮ್ಮ…. ಆದ್ರೂ ಬತ್ತದ ಜೀವನೋತ್ಸಾಹದ ಅದೇ ಹುಡುಗ… hmmmm ಕಥೆಯ ಆರಂಭವೇನೋ ಚೆನ್ನಾಗೆ ಇದೆ… ಆದ್ರೆ ಕೊನೇ ತನ್ಕ ಅದನ್ನ ಉಳಿಸ್ಕೊಂಡು ಹೋಗೋದ್ರಲ್ಲಿ ಭಟ್ಟರು ಎಡವಿರೋದು ಹೌದು…

ಭಟ್ಟರ ಯಾವುದೇ ಸಿನಿಮಾ ನೋಡಿ ಅಲ್ಲಿ ಮಾತು ಮಾತು ಮಾತು…. ಎಲ್ಲವನ್ನೂ ಮಾತಲ್ಲೇ ಹೇಳೋ ಹಂಬಲ ಅವರಿಗೆ…. ಆದರೆ ಕೆಲ ಬಾರಿ ಮೌನವೂ ಅಷ್ಟೇ powerful ಅನ್ನೋದು ಅವರಿಗ್ಯಾಕೆ ಅರ್ಥ ಆಗ್ತಿಲ್ಲ ಅನ್ನೋದೊಂದು million doller ಪ್ರಶ್ನೆ ಕನ್ನಡ ಪ್ರೇಕ್ಷಕನಿಗೆ..!!!
ಈ ಸಿನಿಮಾದಲ್ಲೂ ಅಷ್ಟೆ… ಭಟ್ಟರು ಸಿಕ್ಕಾಪಟ್ಟೆ ವಿಶ್ಯಗಳನ್ನ ಪ್ರೇಕ್ಷಕನ ತಲೆಗೆ ತುಂಬೋ ಪ್ರಯತ್ನ ಮಾಡಿದ್ದಾರೆ…. ಆದ್ರೆ ನೀರಿಳಿಯದ ಗಂಟಲಿಗೆ ಕಡುಬನ್ನ ತುರುಕಿದ್ರೆ ಏನಾಗತ್ತೋ ಅದೇ ಇಲ್ಲೂ ಆಗಿದೆ… ಪಾಪ ಭಟ್ರು… !!! ಅಲ್ಲ ಕನ್ನಡದ ಮೂಕ ಪ್ರೇಕ್ಷಕ!!!!

ಕೇವಲ ಒಳ್ಳೆಯ ಸಂಗೀತ,ಸಾಹಿತ್ಯ ಮತ್ತು ಸುಂದರ ಹುಡುಗ ಹುಡುಗಿ ಇದ್ರೆ ಸಿನಿಮಾನ ಗೆಲ್ಲಿಸಬಹುದು ಅಂತ ಹೊರಟ್ರೆ ಏನಾಗತ್ತೋ ಅದೇ ಆಗಿರುವುದು “ಮನಸಾರೆ”ಗೆ…… ನಿಜವಾಗ್ಲೂ ಈ ಸಿನಿಮಾದ ಸಾಹಿತ್ಯ,ಸಂಗೀತ ಮತ್ತು ಪ್ರತಿ ಫ್ರೇಮ್ ನಲ್ಲಿ ಚಿತ್ರನಾ ಕಟ್ಟಿಕೊಟ್ಟಿರೋ ರೀತಿ…. ಉಹೂಂ…. ಎರಡನೇ ಮಾತೆ ಇಲ್ಲ… ಆದ್ರೇ ಅದರಿಂದ ಈ ಚಿತ್ರನಾ ನಿಜವಾಗ್ಲೂ ಗಲ್ಸೋಕೆ ಆಗಿಲ್ಲ ಅನ್ನೋದೇ ಬೇಸರದ ಸಂಗತಿ….

ಇಲ್ಲಿ ನಂಗೆ ಇನ್ನೊಂದು ತುಂಬಾ ಕಾಡಿರೋದು ಅಲ್ಲಿನ ಹುಚ್ಚಾಸ್ಪತ್ರೆ “ಕಾಮನಬಿಲ್ಲು”… ಬಹುಶ: ಇದನ್ನ ನೋಡಿದ ಎಲ್ಲರಿಗೂ ಇದು ಕಾಡೋದು ಖಂಡಿತಾ…. ಅಲ್ಲಿ ಏನಿಲ್ಲ ಏನಿದೆ ಅಂತಾ ಹೇಳೋದೇ ಕಷ್ಟ…. ಇಡೀ ಪ್ರಪಂಚದ ಜನರ ಪ್ರತಿಬಿಂಬ ಅದು… ಅದನ್ನ ರಾಜು ತಾಳಿಕೋಟೆ ಅಷ್ಟೇ ಸುಂದರವಾಗಿ ಅಭಿನಯಿಸಿದ್ದಾರೆ…. ಬಹುಷ ಅವರ ಚಿನಕುರುಳಿ ಅಭಿನಯದಿಂದಾಗೆ ಹುಚ್ಚಾಸ್ಪತ್ರೆ ದೃಶ್ಯಗಳೂ ಕೂಡಾ ಸಹ್ಯವಾಗಿ ಕಾಣ್ಸತ್ತೆ…. ಆದರೆ ನೀವು ಜಾಸ್ತಿ involve ಆಗಿ ಈ ಸಿನಿಮಾನ ನೋಡಿದ್ರೆ ಸಿನಿಮಾ ಮುಗಿಯೋ ಹೊತ್ತಿಗೆ ನಿಮ್ಗು ಕೂಡಾ “ಕಾಮನಬಿಲ್ಲಿ”ನ address ಕೊಡ್ಬೇಕಾಗತ್ತೆ ಅನ್ನೊದೇ ಈ ಸಿನಿಮಾದ ಹೆಚ್ಚುಗಾರಿಕೆ…. !!!

ಆದ್ರೆ ಈ ಸಿನಿಮಾದಲ್ಲಿನ ಸಂಭಾಷಣೆಗಳು ಹುಚ್ಚು ಹಿಡ್ಸೋ ಥರಾ ಇರೋದಂತೂ ಹೌದು…. ನಿಜಕ್ಕೂ ಅದು ಭಟ್ಟರದ್ದೇ ಒಂದು ಆಸ್ಥಿ…. ಆದ್ರೆ ಅದೇ ಒಂದು hurdle ಕೂಡಾ ಆಗಿರೋದು ವಿಪರ್ಯಾಸ ಅಷ್ಟೆ….

ಇನ್ನು logics ಬಗ್ಗೆ….. ಹ ಹ ಹಾ…. ಕೇಳ್ಬೇಡಿ ಅಷ್ಟೆ… ನಿಮ್ ಕೆಲ್ಸ ಏನಪ್ಪಾ???? …. ವೀಕೆಂಡ್ ಗೆ 2.30 ತಾಸು ಜನಕ್ಕೆ ಮಜಾ ಬೇಕು… ಮೋಜು ಬೇಕು… ಸ್ಡಲ್ಪ ಸೆಂಟಿಮೆಂಟ್ ಬೇಕು… ಎಲ್ಲಾನು ನಾನು ಕೊಟ್ಟಿದ್ದೀನಿ… ಅಂತಾರೆ ನಮ್ ಭಟ್ರು…. ಪಾಪ ನಿಜ ಅಲ್ವ??? ಇಂಥಾ ಒಳ್ಳೇ ಹೆಸರಿರೋ ನಿರ್ದೇಶಕರು ಸಿನಿಮಾ ಕೊಟ್ಟಿದ್ದಾರೆ ಅಂದ್ರೆ ಸುಮ್ನೇನಾ???? ಮುಚ್ಕೊಂಡು ನೋಡಿ ಅಷ್ಟೆ….. ;)…

ಇವ್ನೇನಪ್ಪಾ ಓದೋರು ಎಲ್ಲಾನು ಓದ್ತಾರೆ ಅನ್ಕೊಂಡು ಬರೀತಾ ಇದ್ದಾನೆ ಅಂತ ನೀವು ಅನ್ಕೊಂಡಿದ್ರೆ ನೀವು ಈ ಸಿನಿಮಾನ ನೋಡಿಲ್ಲ ಅಂತಾನೆ ಅರ್ಥ… ಅಥವಾ “ಕಾಮನಬಿಲ್ಲು” ಗೆ ಹೋಗೋಕೆ ನಿಮ್ಮತ್ರ address ಇದೆ ಅಂತಾನೂ ಅನ್ಕೋಬಹುದು….

ಇದೆಲ್ಲವನ್ನೂ ಬದಿಗಿಟ್ಟು ನೋಡಿದ್ರೆ “ಮನಾಸಾರೆ” ಒಮ್ಮೆ ನೋಡಬಹುದಾದ ಸಿನಿಮಾನೆ… ಅದಕ್ಕೆ ನಾವು ಥ್ಯಾಂಕ್ಸ್ ಹೇಳ್ಬೇಕಾಗಿರೋದು ಅಲ್ಲಿನ ಸಾಹಿತ್ಯ,ಸಂಗೀತ,ಚಿತ್ರೀಕರಣ ಮತ್ತು ದಿಗಂತ್ ಮತ್ತು ಇತರರ ಚಿನಕುರುಳಿ ಅಭಿನಯ…. ಸಿನಿಮಾ already 50 ದಿನಗಳನ್ನಂತೂ ಮುಗ್ಸಿ ಮುಂದೆ ನಡೀತಾ ಇದೆ… ಕೆಲ ಚಿತ್ರಮಂದಿರಗಳಲ್ಲಿ 100 ದಿನ ಆಚರಿಸಿಕೊಂಡ್ರೂ ಆಶ್ಚರ್ಯ ಇಲ್ಲ… ಆದ್ರೆ ಅದ್ಕೆ ಬೇರೆ ಒಳ್ಲೇ ಸಿನಿಮಾಗಳು ಇಲ್ಲದಿರೋದು ಒಂದು ಕಾರಣ ಆಗಿರೋದನ್ನ ಸುಳ್ಳು ಅನ್ನಕ್ಕಾಗಲ್ಲ….

ಭಟ್ಟರ ಮುಂದಿನ ಸಿನಿಮಾಗಳಲ್ಲಾದ್ರೂ ಅವ್ರು ಮೌನದ power ಅನ್ನ ಅರ್ಥ ಮಾಡ್ಕೊಂಡ್ರೆ ಕನ್ನಡ ಪ್ರೇಕ್ಷಕನಿಗೆ ಅದ್ಕಿಂತ ದೊಡ್ಡ ಕಾಣಿಕೆ ಇನ್ನೊಂದಿಲ್ಲ….. ಆದ್ರೆ ಅವ್ರಿಗೆ ಇದನ್ನ ಹೇಗೆ ಹೇಳೋದು ಅನ್ನೋದೆ ನನ್ನ ಮುಂದಿರೋ ದೊಡ್ಡ ಪ್ರಶ್ನೆ….

ಈ ಸಿನಿಮಾವನ್ನು ನೋಡಿದ ಎಲ್ಲರಿಗೂ ಕನ್ನಡಾಂಬೆ ಅದನ್ನ ಜೀರ್ಣಿಸಿಕೊಳ್ಳೊ ಶಕ್ತಿನಾ ಕೊಢ್ಳಿ ಅನ್ನೋದೇ ನನ್ನ ಪ್ರಾಮಾಣಿಕ ಪ್ರಾರ್ಥನೆ….

ನಿಮ್ಮವ,
ಕೇಶವ ಪ್ರಸಾದ ಮಾರ್ಗ

Advertisements
 

5 Responses to “ಮನಸಾರೆ ಮತ್ತು ಕಾಮನಬಿಲ್ಲು……”

 1. Pavi Says:

  Good ..Boss…Very good article…Keep it up..I like your writing style.

 2. manju Says:

  ಅತ್ಯುತ್ತಮ ಮಾತುಗಳು sir

 3. sunil Says:

  You have very good style of writing, keep the good work going.

 4. Anutya H R Says:

  Excelent…. neevu manasaare[manasittu] article bardiddeera anta gottaagatte.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s