ಸಿಹಿ ಮಾತು

ಇದು ಮನಸುಗಳ ಮಾತು

ಒಂದೇ ಸಮನೆ….From .. ಗಾಳಿಪಟ.. ಸೆಪ್ಟೆಂಬರ್ 30, 2009

Filed under: ಸಿನಿಮಾ ಸಾಹಿತ್ಯ — Keshava Prasad M @ 5:10 ಅಪರಾಹ್ನ
Tags: , ,

ಗಾಳಿಪಟ – ಯೋಗರಾಜ ಭಟ್ಟರ ಮತ್ತೊಂದು ಸುಂದರ ಸಿನಿಮಾ…. ಇದರಲ್ಲಿನ ಎಲ್ಲಾ ಗೀತೆಗಳು ಸಿನಿ ಪ್ರಿಯರ ಮನ ಗೆದ್ದಿರುವುದೂ ಹೌದು.ಇಲ್ಲಿಯೂ ಜಯಂತ ಕಾಯ್ಕಿಣಿಯವರ ಸಾಹಿತ್ಯ ಮತ್ತೊಮ್ಮೆ ಅದ್ಭುತ ಅನ್ನೋದು ಸಾಬೀತಾಗಿದೆ…. ಹರಿಕೃಷ್ಣ ಕೂಡಾ ಅಷ್ಟೇ ಸುಂದರವಾದ/ಮಧುರವಾದ ಸಂಗೀತ ನೀಡಿದ್ದಾರೆ….
ಇಲ್ಲಿರುವುದು ಅದೇ ಸಿನಿಮಾದ ನನ್ನ ಮನ ಮುಟ್ಟಿದ ಒಂದು ಗೀತೆ….
ಯಾವುದೇ ಒಳ್ಳೇ ಗೀತೆನಾ ಸುಮ್ಮನೇ ಕೇಳೋದಕ್ಕಿಂತ ಅದರ ಸಾಹಿತ್ಯಾನಾ ಹಾಗೆ ಗುನು ಗುನಿಸುತ್ತಾ ಕೇಳಿದರೆ …… ಹೇಳೋಕೆ ಆಗಲ್ಲ ಅನುಭವಿಸ ಬೇಕು ಅಷ್ಟೆ.
ನಿಮ್ಗೇ ಒಳ್ಳೇ ಮನಸ್ಸಿದ್ದರೆ ಇದನ್ನ ಅನುಭವಿಸುತ್ತಾ ಕೇಳಿ… ಹಾಗೆ ನಿಮ್ಮ ಅನುಭವಾನ ಇಲ್ಲಿ ಹಂಚಿ ಕೊಳ್ಳೋಕೆ ಮರೀಬೇಡಿ…

ಒಂದೇ ಸಮನೇ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬೀ ತುಳುಕೋ ಈ ಕಂಗಳಲಿ
ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯಾ ಒಳಗೆ
ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆಬಿಲ್ಲಿನಂತೆ ನೋವು
ಕೊನೆ ಇರದ ಏಕಾಂತವೆ ಒಲವೇ….

ಒಂದೇ ಸಮನೇ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬೀ ತುಳುಕೋ ಈ ಕಂಗಳಲಿ
ಕರಗುತಿದೆ ಕನಸಿನ ಬಣ್ಣ

ಜೀವಾ ಕಳೆವಾ ಅಮೃತಕೆ
ಒಲವೆಂದು ಹೆಸರಿಡಬಹುದೇ
ಪ್ರಾಣಾ ಉಳಿಸೋ ಖಾಯಿಲೆಗೆ
ಪ್ರೀತಿಯೆಂದೆನ್ನ ಬಹುದೇ
ಹೊಂಗನಸಾ ಚಾದರದಲ್ಲಿ
ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗೆ ಬರಲು
ಕಣ್ಣಾ ಹನಿ ಸುಮ್ಮನೆ ಒಣಗಿ
ಅವಳನ್ನೇ ಜಪಿಸುವುದೇ ಒಲವೇ

ಜೀವಾ ಕಳೆವಾ ಅಮೃತಕೆ
ಒಲವೆಂದು ಹೆಸರಿಡಬಹುದೇ
ಪ್ರಾಣಾ ಉಳಿಸೋ ಖಾಯಿಲೆಗೆ
ಪ್ರೀತಿಯೆಂದೆನ್ನ ಬಹುದೇ

ನಾಲ್ಕು ಪದದಾ ಗೀತೆಯಲಿ
ಮಿಡಿತಗಳ ಬಣ್ಣಿಸಬಹುದೇ
ಮೂರು ಸ್ವರದಾ ಹಾಡಿನಲಿ
ಹೃದಯವನು ಹರಿಬಿಡಬಹುದೆ
ಉಕ್ಕಿ ಬರುವ ಕಂಠದಲಿ
ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವ ಎದೆಯೊಳಗೆ
ನಗುತಲಿದೆ ಮಡಿದಾ ಕವನಾ
ಒಂಟಿತನದ ಗುರುವೇ ಒಲವೇ…

ಈಗ at least ಒಂದು ಕೃತಜ್ಞತೆ ಹೇಳಿ…..
ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

3 Responses to “ಒಂದೇ ಸಮನೆ….From .. ಗಾಳಿಪಟ..”

  1. anantha Says:

    super song kanri……………

  2. Aneesh P V Says:

    ಒಂದೇ ಸಮನೆ…. is my favourate song…
    I sang it on two stage performences.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s