ಸಿಹಿ ಮಾತು

ಇದು ಮನಸುಗಳ ಮಾತು

ನವರಾತ್ರಿ ಸ್ವಲ್ಪ ಅತಿಯಾತ್ರಿ……..!!! ಸೆಪ್ಟೆಂಬರ್ 28, 2009

Filed under: ನನ್ನ ಹರಟೆಗಳು — Keshava Prasad M @ 1:58 ಅಪರಾಹ್ನ
Tags: , , , , ,

ಇವ್ನಿಗೇನು ಹುಚ್ಚಾ ಅಂತ ತಿಳ್ಕೋಬೇಡಿ…. ಸ್ವಲ್ಪ ಕಣ್ನು ಬಿಟ್ಟು ಸುತ್ತ ಮುತ್ತ ನೋಡಿ … ಆವಾಗ ನಿಮ್ಗು ಕೂಡಾ ಹಾಗೇ ಅನ್ಸಿಲ್ಲಾಂದ್ರೆ ಕೇಳಿ…
ನವದುರ್ಗೆ
ಹೀಗೆ ಹೇಳ್ತೀನಿ ಅಂತ ಬೇಸರ ಮಾಡ್ಕೋ ಬೇಡಿ, ಇತ್ತೀಚೆಗೆ ನವರಾತ್ರಿ ಆಚರಣೆ ಸಿಕ್ಕಾಪಟ್ಟೆ ಜಾಸ್ತಿಯಾಗ್ತ ಇದೆ. ಈಗ ಅದು ಕೇವಲ ಪೂಜೆ-ಪುನಸ್ಕಾರದ ಮಟ್ಟದಲ್ಲಿ ಖಂಡಿತಾ ಉಳ್ಕೊಂಡಿಲ್ಲ…. ಈಗ ನವರಾತ್ರಿ ಅಂದ್ರೆ prestige ಕಣ್ರೀ prestige ಆಗ್ಬಿಟ್ಟಿದೆ.

ಈ ನವರಾತ್ರಿನ ಒಂದೊಂದು ಕಡೆ ಒಂದೊಂದ್ ಥರಾ ಆಚರಿಸ್ತಾರೆ…. ಮೈಸೂರನ್ನಂತೂ ಬಿಟ್ಟಾಕಿ…. ಇಡೀ ದೇಶಾನೇ ಅಲ್ಲಿರತ್ತೆ..so ನಾನೇನೂ ಹೇಳ್ಬೇಕಾಗಿಲ್ಲ… ಆದ್ರೆ ನಾನು ಹೇಳೋದು ನಂಗೆ ಗೊತ್ತಿರೋ ಒಂದೆರ್ಡು ವಿಶ್ಯಾ ಅಷ್ಟೆ.

ಈಗ ನಮ್ ಕಡೆ ನೋಡಿ ಈ ನವರಾತ್ರಿ ಅಂದ್ರೆ ನಂಗೆ ನೆನ್ಪಾಗೋದು ಹುಲಿವೇಶ ಮತ್ತು ಕೆಲ ಇತರೆ ವೇಷಗಳು… ಅವ್ರೆಲ್ಲಾ ಸೇರಿ ಈ 9 ದಿನಾನ full ಮಜಾವಾಗಿ ಇರೋ ಥರಾ ನೋಡ್ಕೋತಾರೆ. ಆದ್ರೆ ಒಂದೇ ಒಂದು ತೊಂದ್ರೆ ಅಂದ್ರೆ ನೀವು ಅವ್ರ ಕೈಗೆ ಸಿಕ್ಕಾಕೋಬಾರ್ದು ಅಷ್ಟೆ. ಯಾಕಂದ್ರೆ ಅವ್ರೆಲ್ಲಾ ಈ ವೇಷ ಹಾಕೋದಿಕ್ಕೆ ಮೊದ್ಲೆ ಒಂದು ಟಾರ್ಗೆಟ್ ಇಟ್ಕೊಂಡಿರ್ತಾರೆ, ಈ ನವರಾತ್ರೀಲಿ ಇಷ್ಟು ಕಾಸು ಮಾಡ್ಕೋಬೇಕು ಅಂತ…. so ದುಡ್ಡು ಕೇಳಕ್ಕೆ ಅವ್ರು ಪಾಪ ಯಾವ್ದೇ ನಾಚ್ಕೆ ಮಾನ ಮರ್ಯಾದೆ ಇಟ್ಕೊಂಡಿರಲ್ಲ…. ಡೈರೆಕ್ಡಾಗಿ “ಈತ್ ಕೊರ್ಲೆ” ಅಂತ ಒಂದು ರೌಂಡ್ ಫಿಗರ್ ಹೇಳ್ತಾರೆ,,, ಕೊಡೋದಷ್ಟೆ ನಿಮ್ ಕೆಲ್ಸ… ಪಾಪ ದುಡ್ಡಿಲ್ಲಾಂದ್ರೆ ದುನಿಯಾ ಬಹಳ ಕಷ್ಟಾರಿ… ಕೊಟ್ಬಿಡಿ!!!
ಮಂಗಳೂರಿನ ಹುಲಿಗಳು

ಅದೇ ಈ ಕಡೆ ನಮ್ಮ ರಾಜಧಾನಿಗೆ ಬಂದ್ರೆ ನೀವು ಕಾಣೋದೇ ಬೇರೆ…. ಮೊದ್ಲೆ ಬೆಂಗಳೂರು ಅಂದ್ರೆ traffic ಗೆ ಹೆಸರುವಾಸಿ… ಇನ್ನು ಈ ಥರದ ಹಬ್ಬಗಳು ಬಂದ್ರಂತೂ ಕೇಳೋದೇ ಬೇಡ…
ನೀವು ಯಾವ್ದೇ ರಸ್ತೆಗೆ ಹೋಗಿ ಅಲ್ಲಿ traffic jam ಆಗಿಲ್ಲಾಂದ್ರೆ ನೀವು ಯಾವ್ದೋ ಬೇರೆ ಊರಲ್ಲಿದ್ದೀರಾ ಅಂತ ತಿಳ್ಕೋ ಬಹುದು. ಇಲ್ಲಿ ಜನಕ್ಕೆ ಹುಚ್ಚು ಜಾಸ್ತೀರೀ…. (ಸರ್ಯಾಗಿರೋರು ದಯವಿಟ್ಟು ಕ್ಷಮ್ಸಿ).. ನವರಾತ್ರೀಲಿ ಆ ಒಂದು ದಿನ (ಆಯುಧ ಪೂಜೆ ಅಂತಾರೆ) ಎಲ್ಲಾ ವಾಹನ, ಅಂಗ್ಡಿಗೆಲ್ಲಾ ಸಖತ್ತಾಗಿ ಪೂಜೆ ಮಾಡಿಲ್ಲಾಂದ್ರೆ ಏನೋ ಒಂಥರಾ ಕಸಿವಿಸಿ ಆಗತ್ತೆ ಅನ್ಸುತ್ತೆ..!!.. ಅದ್ಕಾಗಿ ಪಾಪ ಎಲ್ಲಾರೂ ಸಾಧ್ಯವಾದ ಮಟ್ಟಿಗೆ ಬಾಳೆಕಂದು, ಕುಂಬಳಕಾಯಿ ಎಲ್ಲಾ ರಸ್ತೆ ಬದಿಯಿಂದಾನೇ ಪರ್ಚೇಸ್ ಮಾಡ್ತಾರೆ… ಅದ್ರಿಂದ ಎಲ್ಲಾ ಕಡೆ ರಸ್ತೆ ಬದಿಯಲ್ಲಿ ಇವನ್ನೆಲ್ಲಾ ರಾಶಿ ಹಾಕ್ಕೊಂಡು ಕೂತಿರ್ತಾರೆ. ಕೂತಿರ್ಲಿ ಬಿಡಿ, ಬೇಡಾ ಅನ್ನಲ್ಲ… ಆದ್ರೆ ಯಾವಗ ತಲೆ ಕೆಡತ್ತೆ ಅಂದ್ರೆ ನಾವು ಇದ್ರಿಂದಾಗಿ ರಸ್ತೆ ಮಧ್ಯದಲ್ಲೇ ಸಿಕ್ಕಾಕೊಳ್ತೀವಲ್ಲಾ ಆವಾಗ!!! ಅಲ್ಲಾ ರಸ್ತೆ ಪಕ್ಕ ಕೂತ್ಕೊಂಡ್ರೆ ಇವ್ನಿಗೇನಪ್ಪಾ ಅಂತಾನಾ????? Vendors ರಸ್ತೆ ಪಕ್ಕಾನೇ ಇರ್ತಾರ್ರೀ… ಆದ್ರೆ ಅದನ್ನ ತಗೊಳ್ಳೋಕೆ ಬರ್ತಾರಲ್ಲ… ಅವ್ರು ಪಾಪ ಗತಿ ಇಲ್ದೆ ರೋಡಲ್ಲೇ ಇರ್ತಾರೆ ಸ್ವಾಮೀ…. ಈಗ ಹೇಳಿ traffic Jam ಆಗ್ದೇ ಇರತ್ತಾ???

ಇದನ್ನೆಲ್ಲಾ ನಾನು ಸಹಿಸ್ಕೋಬಹುದು.. ಆದ್ರೆ ಈ ಒಂದು ದಿನಕ್ಕಾಗಿ ಜನ ಮಾಡೋ ದುಂದು ವೆಚ್ಚ ಇದ್ಯಲ್ಲಾ… ಇದನ್ನ ಮಾತ್ರ ನೋಡ್ಕೊಂಡು ಸುಮ್ನಿರೋದಕ್ಕೆ ನಂಗೆ ಖಂಡಿತಾ ಆಗ್ತಾ ಇಲ್ಲಾರೀ… ಅಲ್ಲಾ ಈ ಬಾಳೆಕಂದು; ಕುಂಬಳಕಾಯಿ ಇಲ್ಲಾಂದ್ರೆ ಪೂಜೆನೇ ಆಗಲ್ವಾ??? ಅದು ಈ ಟೈಮ್ ನಲ್ಲಿ ಅದ್ಕೆಲ್ಲಾ ಏನ್ ರೇಟ್ ಅಂತೀರಾ??? ಬಾಳೆಕಂದಿಗೆ ರೂ 40 ರಿಂದ ರೂ 200 ರ ವರೆಗೆ… ಕುಂಬಳಕಾಯಿಗೆ …. ಬೇಡಬಿಡಿ ನಿಮ್ಗೆಲ್ಲಾ ಗೊತ್ತಿರೋದನ್ನ ವಾಪಸ್ ಏನಕ್ಕೆ ಹೇಳೋಣ??? ಇದೆಲ್ಲಾ ಕೇವಲ ಒಂದು ದಿನಕ್ಕೆ ಮಾತ್ರ….
ಎಲ್ಲಾ ಆಯುಧಪೂಜೆಗಾಗಿ ಸ್ವಾಮೀ...ನನ್ ಪೂಜೆ ಮುಗೀತು... ನಿಮ್ದು???

ನೀವು ಈ ಒಂದು ದಿನಾ ವಾಹನಗಳೆಲ್ಲಾ ಯಾವ ಥರಾ ಸಿಂಗಾರಗೊಂಡಿರತ್ತೆ ಅಂತಾ ಖಂಡಿತಾ ನೋಡಿರ್ತೀರಾ…. ಆದ್ರೆ ಅವ್ರು ಅದ್ಕೆಲ್ಲಾ ಮಾಡಿರೋ ಖರ್ಚನ್ನಾ ಅದೇ ವಾಹನಾನ ಒಮ್ಮೆ ಸರ್ಯಾಗಿ ಸರ್ವೀಸ್ ಮಾದ್ಸೋಕೆ ಉಪಯೋಗಿಸಿದ್ರೆ ಏನಾಗ್ತಿತ್ತು ಅಂತ ಒಮ್ಮೆ ಯೋಚ್ನೆ ಮಾಡಿದ್ದೀರಾ???
ಇಲ್ಲಾಂದ್ರೆ ಕೇಳಿ ನಾನು ಹೇಳ್ತೀನಿ…
ಅದು ಕೆಟ್ಟ ಹೊಗೆ ಉಗ್ಳೋದು ಸ್ವಲ್ಪ ಕಡ್ಮೆ ಆಗ್ತಿತ್ತು
ಅದ್ರಿಂದ ಪರಿಸರ ಸ್ವಲ್ಪ ಕ್ಲೀನ್ ಆಗ್ತಿತ್ತು..
ವಾಹನ ಅರ್ಧ ದಾರೀಲಿ ಕೆಟ್ಟೋಗೋದು ಕಡ್ಮೆ ಆಗ್ತಿತ್ತು…
ಎಲ್ಲಕ್ಕಿಂತ ಹೆಚ್ಚಾಗಿ ಸುಮ್ಗೇ ಹಾಳಾಗೋ ಆ ಕುಂಬಳಕಾಯಿ ಮತ್ತು ಬಾಳೆನಾ ಯಾರಾದ್ರೂ ಅಗತ್ಯ ಇರೋರು ಬಳಸ್ಕೋ ಬಹುದಿತ್ತು… ಅದೂ ಕಡ್ಮೆ ರೇಟ್ ನಲ್ಲಿ!!!

ಯೋಚ್ನೆ ಮಾಡಿದ್ರೆ ಇನ್ನೂ ಏನೇನೋ ಹೇಳ್ಬಹುದು… ಆದ್ರೆ ಇದನ್ನೆಲ್ಲಾ ನಮ್ಮ ಜನಕ್ಕೆ explain ಮಾಡೋದು ಹೇಗೆ???? prestige ಅನ್ನೋದು ಒಂದು ತಲೆಯಲ್ಲಿ ಕೂತಿರ್ಬೇಕಿದ್ರೆ ಉಳ್ದಿದ್ದು ಅರ್ಥ ಆಗೋದು ಖಂಡಿತಾ ಡೌಟೇ… ಯಾರೋ ಮಾಡ್ತಾರೆ ಅಂತ ನಾವು ಮಾಡೋದಕ್ಕಿಂತ…ಅದು ನಿಜವಾಗ್ಲೂ ಬೇಕಾ ಅಂತ ಯೋಚ್ನೆ ಮಾಡಿ ಮಾಡಿದ್ರೆ ಅದರ ಮಜಾನೇ ಬೇರೆ…ಅಲ್ಲಾ.. ನನ್ ಪ್ರಕಾರ ವಾಹನಕ್ಕೆ ನಿಜವಾದ ಪೂಜೆ ಅಂದ್ರೆ ಅದನ್ನ ಸುಸ್ಥಿತಿಯಲ್ಲಿ ಇಟ್ಕೊಳ್ಲೋದು, ಮತ್ತು ಇನ್ನೊಬ್ರಿಗೆ ತೊಂದ್ರೆ ಆಗದಂತೆ ಡ್ರೈವ್ ಮಾಡೋದು!!

ನಾನೇನೋ ಸುಲಭವಾಗಿ ಹೇಳ್ಬಿಟ್ಟೆ… ಆದ್ರೆ ನಿಜವಾಗ್ಲೂ ನಾವಿದನ್ನ ತಡಿಯೋಕ್ಕೆ ಆಗತ್ತಾ???? ಖಂಡಿತಾ ಆಗತ್ತೆ ಅನ್ನೋ ನಂಬಿಕೆ ನಂಗಂತೂ ಇದೆ… ನೀವೂ ಕೂಡಾ ನನ್ಜತೆ ಕೈ ಜೋಡಿಸಿದ್ರೆ ಮುಂದಿನ ವರ್ಷಾನಾದ್ರೂ ನಾವು ಸ್ವಲ್ಪ ಬದಲಾವಣೇನಾ ನೋಡ್ಬಹುದು… ನೀವೆಲ್ಲಾ ಖಂಡಿತಾ ನನ್ಜೊತೆ ಇರ್ತೀರಾ ಅನ್ನೋ ನಂಬಿಕೆ ನಂಗಿದೆ…
ಆರು ಯತ್ನ ನಮ್ದು.. ಏಳನೇದು ದೇವರಿಚ್ಛೆ… ಏನಂತೀರಾ???

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ.

Advertisements
 

One Response to “ನವರಾತ್ರಿ ಸ್ವಲ್ಪ ಅತಿಯಾತ್ರಿ……..!!!”

  1. prasad Says:

    Hello Boss,
    Swalpa cool aagi plz… jagattinakoleyannu nimminda toleyakkaga…neevestu helidru aste…jana avrista bandidde maadodu…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s