ಸಿಹಿ ಮಾತು

ಇದು ಮನಸುಗಳ ಮಾತು

ಗಣಪತಿ ಹಬ್ಬ ನಾನು ನೋಡಿದ ಹಾಗೆ….. ಸೆಪ್ಟೆಂಬರ್ 5, 2009

Filed under: ನನ್ನ ಹರಟೆಗಳು — Keshava Prasad M @ 6:53 AM

ಚೌತಿ ಪ್ರತಿ ವರ್ಷ ಬರತ್ತೆ…. ಅದರಲ್ಲೇನು ವಿಶೇಷ ಅಂತೀರಾ???? ಅಲ್ಲೇ ಇರೋದು ಮಜಾ….

ಚೌತಿ ಬರ್ತಿದ್ದ ಹಾಗೇ ಎಲ್ಲಾರೂ ಎಸ್ಟು ದಿನ ರಜಾ ಇದೆ ಅಂತ ಕ್ಯಾಲೆಂಡರ್ ನೋಡ್ತಾರೆ. ಅಲ್ಲಿಂದ ಶುರು ನೋಡಿ ಮಜಾ.. ಅದೆಲ್ಲಾದ್ರೂ ಶುಕ್ರವಾರ ಬಂದ್ರೆ ಓಕೆ, ಆದ್ರೆ ಎಲ್ಲಾ ಸಲ ಆ ಥರ ಆಗಲ್ವಲ್ಲ….

ಈ ಸಲ ನೋಡಿ ಅದು ಬಂದಿರೋದು ರವಿವಾರ….   ಎಲ್ಲಾರ್ಗು ಒಂಥರಾ ಬೇಸರದ ವಿಶ್ಯ ಅದು. ಹೋಗ್ಲಿ ಬಿಡಿ ಅನ್ನೋಕಾಗತ್ತಾ??? ಇಲ್ಲ. ಈಗ ನಂಗೇ ನೋಡಿ ಅದ್ರಿಂದಾಗಿ 2 ದಿನ ರಜಾ ಹಾಕ್ಬೇಕಾಯ್ತು. ಈ recession time ನಲ್ಲಿ 1 ದಿನ ರಜಾ ಸಿಗೋದೇ ಕಷ್ಟ. ಅಂಥಾದ್ರಲ್ಲಿ 2 ದಿನ…. ಹೋಗ್ಲಿ ರಜಾ ಸಿಕ್ತು… ಹಬ್ಬಾನಾ ಮಜಾವಾಗಿ ಅನುಭವಿಸಕ್ಕೆ ಅಗತ್ತಾ??? Once again recession problme. ನಿಮ್ಗೆ ಸಿಕ್ಕಿರೋ 2ನೇ ದಿನದ ರಜಾದಲ್ಲಿ ನಿಮ್ ಬಾಸ್ ಕಾಲ್ ಮಾಡಕ್ಕೆ ಶುರು ಮಾದ್ತಾನೆ. ಬೇಕಾ ಈ ರಜಾ ಆವಾಗ???  ಒಂದು ವೇಳೆ ನಿಮ್ಗೆ direct ಆಗಿ ಕಾಲ್ ಬರ್ಲಿಲ್ಲ ಅನ್ಕೊಳ್ಳಿ, ನಿಮ್ ಕಲೀಗ್ ಹತ್ರ ಕಾಲ್ ಮಾಡ್ಸಿ ನಿಮ್ ತಲೆ ಬಿಸಿ ಮಾಡ್ಸೋಕೆ ಶುರು ಮಾಡೆ ಮಾಡ್ತಾನೆ. ಆವಾಗ ಯಾಕಪ್ಪ ರಜ ಹಾಕ್ದೆ ಅಂತ ಅನ್ಸೋಕೆ ಶುರು ಆಗತ್ತೆ, ಆದ್ರೆ ರಜಾ ಮುಗ್ಸಿ officeಗೆ ವಾಪಸ್ ಹೋಗ್ತೀರಲ್ಲ ಆಗ ಅದು confirm ಆಗತ್ತೆ.

ಹೋಗ್ಲಿ ಏನೋ ಹೇಳಕ್ಕೆ ಹೋಗಿ ಏನೋ ಅನ್ತಾ ಇದ್ದೀನಿ, ಏನ್ ಮಾಡೋಣ, ವಿಶ್ಯ ಸುಮಾರಿದೆ ಹೇಳೋದು, ಆದ್ರೆ ಹೇಳೋದ್ ಹೇಗೆ ಅಂತ ಗೊತ್ತಾಗ್ತಿಲ್ಲ.

ಈ ಗಣಪತಿ ಹಬ್ಬ ಅಂದಾಗ ನಂಗೆ ನೆನ್ಪಾಗೋ ಇನ್ನೊಂದು ವಿಶ್ಯ ಅಂದ್ರೆ, ಗಣಪತಿ ವಿಸರ್ಜನೆ….

ಬೆಂಗಳೂರಿನಲ್ಲಿ ಸುಮ್ಮನೆ ನಡೆದಾಡೋದೆ ಕಷ್ಟ, ಇನ್ನು ಈ ಚೌತಿ ಸಮಯದಲ್ಲಂತೂ ಅಬ್ಬಾ…. ಜನರನ್ನ ಆ ಗಣೇಶನಿಗೂ ಕಾಪಡಕ್ಕೆ ಆಗಲ್ಲ. ಯಾವ ಗಲ್ಲಿ ನೋಡಿ ಅಲ್ಲಿ ಒಂದು ಟೆಂಟ್, ದೊಡ್ಡದಾಗಿ ಮೈಕ್, ಸ್ವಲ್ಪ filmy dance, ನಾಲ್ಕು ಮತ್ತೊಬ್ಬ ಜನ ಮತ್ತು ಮರೀಯದೇ ಒಂದು ಪಾಪದ ಗಣೇಶನ ವಿಗ್ರಹ ಇದ್ದೇ ಇರತ್ತೆ. ಈ ಟೆಂಟಾದ್ರು ಎಲ್ಲಿ ಹಾಕಿರ್ತಾರೆ ಅಂತೀರಾ???? ಇನ್ನೆಲ್ಲಿ ಆ ಗಲ್ಲಿ ಜನ ಓಡಾಡಕ್ಕೆ ಅಂತ ಇರೋ ಒಂದೇ ಒಂದು Roadನಲ್ಲಿ. ಈಗ ಯೋಚ್ನೆ ಮಾಡಿ ಗಣೇಶ ಆ ಗಲ್ಲಿ ಜನ್ರನ್ನ ಈ so called ಭಕ್ತರಿಂದ ರಕ್ಷಿಸೋಕೆ ಸಾಧ್ಯನಾ???

ಹೀಗೆ ಇರೋ ಮೂರ್ತಿಯನ್ನ ನಾಲ್ಕೋ ಐದೋ ದಿವ್ಸ ಇಟ್ಟು ಕೊನೆಗೊಂದು ದಿನಾ ವಿಸರ್ಜನೆ ಮಾಡ್ತಾರೆ, ಆ ದಿನ ಆ ಗಲ್ಲಿ ಹುಡ್ಗರಿಗೆಲ್ಲಾ full ಖುಶಿ ಯಾಕಂದ್ರೆ ಸಕ್ಕತ್ ಮೋಜು ಮಸ್ತಿ ಇರತ್ತಲ್ಲ; ಅದೇ ಥರಾ ಗಲ್ಲಿಯಲ್ಲಿ ಉಳ್ದೋರಿಗೂ ಖುಶಿ ಯಾಕಂದ್ರೆ ಇನ್ನು ಮುಂದಾದ್ರೂ ಒಂದು ವರ್ಷದ ತನ್ಕ ಆರಾಮ ಇರ್ಬಹುದಲ್ಲಾ ಅಂತ. ಆದ್ರೆ ಆ ಮೂರ್ತಿನ ಕೂರ್ಸೋವಾಗ ಇರೋ ಉತ್ಸಾಹ ಅವ್ರಲ್ಲಿ ವಾಪಸ್ ಕಲ್ಸೊವಾಗ ಇರಲ್ಲ, ಸ್ವಲ್ಪ ತಮ್ಟೆ ಬಾರ್ಸಿ ಕುಣಿದ್ರೆ ಅವ್ರ ಕೆಲ್ಸ ಮುಗೀತು ಅನ್ಕೋತಾರೆ. ಆ ನೀರಿನಲ್ಲಿ ಕರಗದ ಮೂರ್ತಿನಾ ಯಾವುದೋ ಒಂದು ಕೆರೆನಲ್ಲಿ ಬಿಸಾಕಿ ಬರ್ತಾರೆ. ಈಗ 4-5 ದಿನ ಇದ್ದ ವ್ಯಾಲ್ಯೂ ಆ ಮೂರ್ತಿಗೆ ಇರಲ್ಲ, ಅನಾಥವಾಗಿ ಕೆರೆ ದಡದಲ್ಲಿ ಬಿದ್ದಿರತ್ತೆ, ಸ್ವಲ್ಪ ಮಟ್ಟಿಗೆ ಕೆರೆ ನೀರನ್ನ ಕಲುಷಿತ ಗೊಳ್ಸತ್ತೆ. ಇದನ್ನ ಕೊನೆಗೂ ಸರ್ಯಾಗಿ ವಿಲೇವಾರಿ ಮಾಡೋರು ಯಾರೂ ಇರಲ್ಲ. ನಂಗೇ ಅದೇ ಸಿಕ್ಕಾಪಟ್ಟೆ ಬೇಜಾರ್ ತರ್ಸೋದು. ಅಲ್ಲ ಈ ಗಣೇಶನ್ನ ಕೂರಿಸ್ತಾರಲ್ಲ ಅವ್ರಿಗೆ ಇದನ್ನ ಹೇಳೋದು ಯಾರು????

ಪಾಪ ಸರ್ಕಾರದವ್ರು ಯಾವಗ್ಲೂ ಈ ಬಗ್ಗೆ ಪೇಪರ್ನಲ್ಲಿ, FMನಲ್ಲಿ, TVನಲ್ಲಿ ಹೇಳಿಸ್ತಾನೆ ಇರ್ತಾರೆ. but no use. ಹೀಗೆ ಹೇಳ್ದೋರೆ ಕೊನೆಗೆ ಮೇಲೆ ಹೇಳ್ದಂಥಾ ವಿಸರ್ಜನಾ ಮೆರವಣಿಗೆಲಿ ಭಾಗವಹಿಸಿ; ಇಂಥಾ ಕಾರ್ಯಕ್ರಮ ನಡೆಸ್ತಾ ಇರೋ ಇವ್ರನ್ನ ತುಂಬಾ ಮೆಚ್ಕೊಳ್ತಾರೆ, ಹೊಗಳ್ತಾರೆ, ತಮ್ಗೆ ಮುಂದಿನ ಇಲೆಕ್ಷನ್ ಇವ್ರ ಮೂಲಕ ಹೇಗೆ ಗೆಲ್ಬಹುದು ಅಂಥ ಯೋಚ್ನೆ ಮಾಡ್ತಾರೆ. ಹೇಳಿ ನಾವಿದನ್ನೆಲ್ಲಾ ತಡ್ಯೋಕೆ ಸಾಧ್ಯನಾ????

ಹೋಗ್ಲಿ next year ಆದ್ರೂ ನಾವು ಸ್ವಲ್ಪ change ಮಾಡೋಕೆ try ಮಾಡೋಣ್ವಾ????

ನೀವೆಲ್ಲಾ ಇದೇ ದಿಕ್ಕಲ್ಲಿ ಯೋಚ್ನೆ ಮಾಡಿದ್ರೆ ನಾವು ಖಂಡಿತಾ ಇಂಥ ವ್ಯವಸ್ಥೇನಾ ಸ್ವಲ್ಪಾನಾದ್ರೂ change ಮಾಡ್ಬಹುದು.

“ಬದಲಾಗುವುದು ಈ ಲೋಕ ನೀ ಬದಲಾದರೆ,

ಸರಿಯಾಗುವುದು ಸಮಾಜ ನೀ ಮೊದಲಾದರೆ”

Advertisements
 

12 Responses to “ಗಣಪತಿ ಹಬ್ಬ ನಾನು ನೋಡಿದ ಹಾಗೆ…..”

 1. Praveena M Says:

  Hi,
  Very good ….
  ಇದು ಒಳ್ಳೇ ಪ್ರಯತ್ನ …. ಇದನ್ನ ..Continue .ಮಾಡಿ. ನಿಮ್ಮ ಈ ಪ್ರಯತ್ನಕ್ಕೆ ನಾನಾದೊಂದು thanks..and congrats. also.ನಾವು ಕೂಡ ನಮ್ಮ ಊರಲ್ಲಿ ಹಬ್ಬನಾ ಮಾಡ್ತೀದ್ವಿ ಅಂದ್ರೆ ಗಣೇಶನ್ನ್ನ ತಂದು ಪೂಾಜೇ ಮಾಡಿ ..ಆಮೇಲೆ ನೀರಲ್ಲಿ ಗುಲಮ್ ಮಾಡಿ ಬರ್ತಿದ್ವಿ .. ಅಲ್ಲಾದ್ರೂ ದೊಡ್ಡ ದೊಡ್ಡ ಕೆರೆ ಇತ್ತು ಆದ್ರೆ ಇಂತಹ Bangalore ನಲ್ಲಿ ಜನರಿಗೇ ಜಾಗ ಇಲ್ಲ ಇನ್ನೂ ಕೆರೆಗಳಾ ದಿನದಿಂದ ದಿನಕ್ಕೆ ಚಿಕ್ಕದಾಗ್ತಾ ಇದಾವೆ .

 2. Praveena M Says:

  Hi,
  Very good ….
  ಇದು ಒಳ್ಳೇ ಪ್ರಯತ್ನ …. ಇದನ್ನ ..Continue .ಮಾಡಿ. ನಿಮ್ಮ ಈ ಪ್ರಯತ್ನಕ್ಕೆ ನಾನಾದೊಂದು thanks..and congrats. also.ನಾವು ಕೂಡ ನಮ್ಮ ಊರಲ್ಲಿ ಹಬ್ಬನಾ ಮಾಡ್ತೀದ್ವಿ ಅಂದ್ರೆ ಗಣೇಶನ್ನ್ನ ತಂದು ಪೂಾಜೇ ಮಾಡಿ ..ಆಮೇಲೆ ನೀರಲ್ಲಿ ಗುಲಮ್ ಮಾಡಿ ಬರ್ತಿದ್ವಿ .. ಅಲ್ಲಾದ್ರೂ ದೊಡ್ಡ ದೊಡ್ಡ ಕೆರೆ ಇತ್ತು ಆದ್ರೆ ಇಂತಹ Bangalore ನಲ್ಲಿ ಜನರಿಗೇ ಜಾಗ ಇಲ್ಲ ಇನ್ನೂ ಕೆರೆಗಳಾ ದಿನದಿಂದ ದಿನಕ್ಕೆ ಚಿಕ್ಕದಾಗ್ತಾ ಇದಾವೆ . ದೊಡ್ಡ ದೊಡ್ಡ ವಿಗ್ರ್ಹಹ ಗಳಿಗೆ ಆ ಕೆರೆಗಳ .. full ಆಗ್ತಾವೆ .. ಅದು ಮತ್ತೊಂದು ವಿಷ್ಯ Kepi… ನಾನು ನೋಡಿರೋ ದು Bangalore ನಲ್ಲಿ , 1st day ಗಣೇಶ ನನ್ನ್ ತರೋದು ..ಪೂಜೆ ಆಮೇಲೆ Night full ಫಿಲ್ಮ್ ಸಾಂಗ್ ಗೆ ಡ್ಯಾನ್ಸ್ with some crazy girls…..ಇದು ಗಣೇಶ festival ..ಅಲ್ವಾ..ಕಾಲ ಕೆಟ್ಟೋಯ್ತು ಕಣ್ರೀ ಗಣೇಶ ನ ನೆಪದಲ್ಲಿ ಹಣ ವಸೂಲಿ .. ಸಣ್ಣ ಸಣ್ಣ ಮಕ್ಲು ಕೂಡ ..small small box ಹಿಡ್ಕಂಡು money collection..
  ನಾವ್ಯಾಕೆ ಪ್ರತಿ ವರ್ಷನು ಗಣೇಶ ನ ವಿಗ್ರಹ purchase ಮಾಡ್ಬೇಕು.. ಮರದ ಅತವ ಕಲ್ಲಿನ ವಿಗ್ರಹ ಇಟ್ಟು ಪೂಜೆ ಮಾಡ್ ಬಹುದಲ್ವಾ..

  Once again Congrats Kepi..
  :)Pavi

 3. Venkat Kulamarva Says:

  Good one…. continue the same….

 4. murali Says:

  Super start……
  lets put our hand together ….

 5. Yashavantha Kumar Says:

  good one continue regarding ganesha festival

 6. manjunatha km Says:

  Hi

  ok

  But Navu hindugalu unity agirodu thumba kadime. adarallu bereyavarige namma unity gottagodu ganesh habbada timalli mathra. navu janara Bhakthiya percentage nododu beda, result nodona. Dinakke 6 sari mykalli koogora munde, mane manege hogi ‘kartha’ kartha antha mathodora munde bari varshkke 5-10 dina mikalli koogi, gallili kulithu neerige hogo Ganesha innoo swalpa dina irli. Yella beediyallu ganesha barali.

  ok.

 7. Seems to be giving birth to prominent writer, i wish you every success in your endeavour. However now a days festivals were seems to be an drama, there will be no naturally vision in it due to bad politics in and around us.

  with best wishes,
  KODAKKAL SHIVAPRASAD
  http://www.kodakkalshivaprasad.blogspot.com

 8. Aneesh P V Says:

  ಯಾವ ರೀತಿ ಚೇಂಜ್ ಮಾಡಬಹುದು ಅಂತ ನೀವೇ ಹೇಳಿಬಿಡಿ…. ನಮ್ ಜನಕ್ಕೆ ಅದನ್ನ ಯೋಚ್ನೆ ಮಾಡೋಕೂ ಟೈಮ್ ಇಲ್ಲಾರಿ…
  ಬರಹ ತುಂಬಾ ಚೆನ್ನಾಗಿದೆ ಸ್ಟಾರ್ಟ್ ಸ್ವಲ್ಪ ಗಲಿಬಿಲಿ…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s